BIGGBOSS 8 : ಮನೆಯಿಂದ ಹೊರನಡೆದ ಟಾಪ್ 5ನೇ ಕಂಟೆಸ್ಟೆಂಟ್ ಸಂಬರಗಿ..!
ಇಷ್ಟು ದಿನ ಮನೆಯಲ್ಲಿ ಹೆಣಗಾಡಿ , ಪ್ರತಿಸ್ಪರ್ಧಿಗಳ ಜೊತೆಗೆ ಹೋರಾಡಿ ಪ್ರೇಕ್ಷಕರ ಸಪೋರ್ಟ್ ನಿಂದ ಹಾಗೋ ಹೀಗೋ ಫೈನಲ್ಸ್ ಪ್ರವೇಶ ಮಾಡಿದ್ದ ಐವರ ಪೈಕಿ ಪ್ರಶಾಂತ್ ಸಂಬರಗಿ ಮನೆಯಿಂದ ಆಚೆ ಹೋಗಿದ್ದಾರೆ.. ಬಿಗ್ಬಾಸ್ ಸೀಸನ್-8 ಗ್ರಾಂಡ್ ಫಿನಾಲೆ ಅದ್ದೂರಿಯಾಗಿ ಜರುಗುತ್ತಿದ್ದು, ಸ್ಪರ್ಧಿಗಳ ನಡುವೆ ಬಿಗ್ಬಾಸ್ ಟ್ರೋಫಿಗಾಗಿ ಟಫ್ ಫೈಟ್ ನಡೆಯುತ್ತಿದೆ. ಈ ಮಧ್ಯೆ ಬಿಗ್ಬಾಸ್ ಮನೆಯ ಟಾಪ್ 5 ಕಂಟೆಸ್ಟೆಂಟ್ ಆಗಿ ಪ್ರಶಾಂತ್ ಸಂಬರಗಿ ಹೊರನಡೆದಿದ್ದಾರೆ.
ಈ ಮೂಲಕ ದಿವ್ಯಾ ಉರುಡುಗ , ಅರವಿಂದ್ , ಮಂಜು ಪಾವಗಡ ಟಾಪ್ 5 ಕಂಟೆಸ್ಟೆಂಟ್ ಗಳಾಗಿ ಉಳಿದುಕೊಂಡಿದ್ದಾರೆ.. ಆರಂಭದಿಂದಲೂ ವಿಭಿನ್ನವಾಗಿಯೇ, ಇತರೇ ಸದಸ್ಯರ ಜೊತೆಗೆ ಕಿರಿಕ್ ಮಾಡಿಕೊಳ್ತಾ , ಪ್ರತಿಭಟನೆ ಮಾಡುತ್ತಾ, ಹೀಗೆ ವಿಭಿನ್ನ ಕ್ಯಾರೆಕ್ಟರ್ ಮೂಲಕವೇ ಗುರುತಿಸಿಕೊಂಡಿದ್ದ ಸಂಬರಗಿ ಇದೀಗ ಮನೆಯಿಂದ ಟಾಪ್ 5 ಕಂಟೆಸ್ಟೆಂಟ್ ಆಗಿ ಹೊರನಡೆದಿದ್ದಾರೆ.. ಐದನೇ ಸ್ಥಾನವನ್ನು ಪಡೆದು ಆಚೆ ಬಂದಿರುವ ಸಂಬರಗಿ ಅವರಿಗೆ 2.5 ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 6,69,020 ವೋಟ್ ಪಡೆದು ಮನೆಯಿಂದ ಆಚೆ ಬಂದಿದ್ದಾರೆ.