ನೀನ್ಯಾರು ಕೇಳೋಕೆ…? ನೀನೇನು ಬಿಗ್ ಬಾಸಾ..? ಸಂಬರಗಿಗೆ ವಾರ್ನಿಂಗ್ ಕೊಟ್ಟ ಅರವಿಂದ್..!
ಬಿಗ್ ಬಾಸ್ ಮನೆಯಲ್ಲಿ ಸದಾ ಒಬ್ಬರಲ್ಲಾ ಅಂದ್ರೆ ಮತ್ತೊಬ್ಬರ ಜೊತೆಗೆ ಪ್ರಶಾಂತ್ ಸಂಬರಗಿ ಅಥವ ಚಕ್ರವರ್ತಿ ಇಬ್ಬರಲ್ಲಿ ಒಬ್ಬರೂ ಕಿರಿಕ್ ಮಾಡಿಕೊಳ್ತಲೇ ಇರುತ್ತಾರೆ.. ಇವರಿಬ್ಬರೂ ಸಹ ಕಿತ್ತಾಡಿಕೊಂಡಿರುವುದು ಉಂಟು.. ಅಲ್ಲದೇ ತೀರಾ ಇತ್ತೀಚೆಗೆ ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಜೊತೆಗೆ ಸಂಬರಗಿ ಕಿತ್ತಾಡಿಕೊಂಡಿದ್ದರು. ದಿವ್ಯಾ ಉರುಡುಗ ಮೋಸ ಮಾಡಿ ಮರ್ಯಾದೆ ತೆಗೆದಿದ್ದಾಲೆ ಎಂದು ಕಣ್ಣೀರಿಟ್ಟಿದ್ದರು.
ಇದೀಗ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ನಡೆದಿದ್ದು, ಅರವಿಂದ್ ಸಂಬರಗಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಬಿಗ್ ಬಾಸ್ ದಿವ್ಯಾ ಉರುಡುಗ ಅವರ ಕ್ಯಾಪ್ಟೆನ್ಸಿ ಅವಧಿ ಮುಗಿದಿದೆ ಎನ್ನುತ್ತಲೇ ಎಲ್ಲರೂ ಚಪ್ಪಾಳೆ ತಟ್ಟಿದ್ದು, ಬಳಿಕ ಪ್ರಶಾಂತ್ ಸಂಬರಗಿ ದಿವ್ಯಾ ಉರುಡುಗ ಅವರ ಕೈ ಕುಲುಕಿದ್ದಾರೆ. ಈ ವೇಳೆ ಅರವಿಂದ್ ಅದು ಸುಳ್ಳು, ಇದನ್ನು ನಂಬಬೇಡ. ಹುಚ್ಚ ಬಂದರು, ಅವರು ಸ್ನೇಹಿತರಂತೆ ಚೆನ್ನಾಗಿದ್ದು, ಹಿಂದೆ ಮಾತನಾಡುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಉತ್ತರಿಸಿ ನಾನು ನೇರವಾಗಿಯೇ ಮಾತನಾಡುತ್ತೇನೆ. ನಿನಗೆ ಸ್ಪೋರ್ಟಿವ್ ಸ್ಪಿರಿಟ್ ಇಲ್ಲ ಗುರು ಎಂದಿದ್ದಾರೆ.
ಇದಕ್ಕೆ ರೊಚ್ಚಿಗೆದ್ದ ಅರವಿಂದ್ ನನ್ನ ಕ್ಯಾರೆಕ್ಟರ್ ಬಗ್ಗೆ ನೀವು ಮಾತನಾಡಬೇಕಿಲ್ಲ, ನಿಮ್ದು ನೀವು ನೋಡ್ಕೊಳಿ. ನಿಮ್ಮ ಮಾರ್ಗದರ್ಶನ ನಮಗೆ ಬೇಕಾಗಿಲ್ಲ. ನಿನ್ನ ಬಗ್ಗೆ ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ನಿನಗೆ ಒಂದು ವಿಮರ್ಶೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲವೆಂದರೆ ಹೇಗೆ ಎಂದು ಸಂಬರಗಿ ಪ್ರಶ್ನಿಸಿದ್ದಾರೆ. ತಕ್ಷಣವೇ ಉತ್ತರಿಸಿದ ಅರವಿಂದ್ ಕ್ರಿಟಿಸಿಸಂ ತೆಗೆದುಕೊಳ್ಳುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಹುಚ್ಚ ಆಚೆ ಹೋಗಿ ದಿವ್ಯಾ ಉರುಡುಗ ಹೀಗೆ, ಹಾಗೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬರಗಿ ಪ್ರತಿಕ್ರಿಯಿಸಿ, ಹೌದು ಫೇವರಿಟಿಸಂ ಮಾಡುತ್ತಿದ್ದೀಯಾ ಎಂದು ನಾನು ಹೇಳಿದೆ. ಎರಡು ವಿಚಾರದಲ್ಲಿ ಫೇವರಿಟಿಸಂ ಆಗಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ತಕ್ಷಣ ಅರವಿಂದ್ ನೀನ್ಯಾರು ಕೇಳೋದಕ್ಕೆ. ನೀನೇನು ಬಿಗ್ ಬಾಸಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಂಬರಗಿ ಸಹ ನೀನು ಬಿಗ್ ಬಾಸಾ ಎಂದು ಅರವಿಂದ್ ಗೆ ಮರು ಪ್ರಶ್ನೆ ಹಾಕಿದ್ದಾರೆ.
ಈ ವೇಳೆ ಮಾತಿನ ಚಕಮಕಿ ನಡುವೆ ಮುಚ್ಗೊಂಡು ಕೂರು ಎಂದು ಅರವಿಂದ್ ಹೇಳಿದ್ದಾರೆ.. ಇದಕ್ಕೆ ಸಂಬರಗಿ ಕೂಡ ರೊಚ್ಚಿಗೆದ್ದು ನೀನ್ ಕೂರು ಎಂದು ಕಿಡಿಕಾರಿದ್ಧಾರೆ. ಆಗ ಅರವಿಂದ್ ಕೂರಲ್ಲ ಏನ್ ಮಾಡ್ತಿಯಾ ಎಂದು ರಾಂಗ್ ಆಗಿದ್ದಾರೆ. ಆಗ ಸಂಬರಗಿ ಸಹ ನೀನ್ ಏನ್ ಮಾಡ್ತಿಯಾ ಎಂದು ಎದ್ದಿದ್ದಾರೆ. ಅರವಿಂದ್ ತರಕಾರಿ ಕಟ್ ಮಾಡುತ್ತಿದ್ದ ಚಾಕು ಕೆಳಗಿಟ್ಟು ಏನೂ ಎಂದು ಸಿಟ್ಟಿಂದ ಬಂದಿದ್ದಾರೆ. ಆಗ ರಘು ಅವರನ್ನ ತಡೆದಿದ್ದಾರೆ. ಒಟ್ಟಾರೆ ಗಲಾಟೆ ಮಿತಿ ಮೀರಿ ಅರವಿಂದ್ ಸಂಬರಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ಶಮಂತ್ ಹಾಗೂ ರಘು ಮದ್ಯ ಬಂದು ತಡೆದಿದ್ದಾರೆ.