‘ನಾನು ಲಸಿಕೆ ಪಡೆದುಕೊಂಡಿಲ್ಲ, ಅಮೆರಿಕಾದ ವ್ಯಾಕ್ಸಿನ್ ಗೆ ಕಾಯುತ್ತಾ ಇದ್ದೇನೆ’ : ರಮ್ಯಾ
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮಿಂಚಿ , ರಾಜಕಾರಣದಲ್ಲೂ ಸದ್ದು ಮಾಡಿ ಎರೆಡೂ ಕ್ಷಷತ್ರಗಳಿಂದ ಮರೆಯಾದ ಮೋಹಕ ತಾರೆ ರಮ್ಯಾ ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿಗೆ ಬರುತ್ತಲೇ ಇರುತ್ತಾರೆ.. ಇತ್ತೀಚೆಗೆ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆಗೆ ರಮ್ಯಾ ಲೈವ್ ಗೆ ಬಮದಿದ್ದು, ಅಭಿಮಾನಿಗಳು ಖುಷ್ ಆಗಿದ್ದಾರೆ.. ಲೈವ್ ನಲ್ಲಿ ರಮ್ಯಾ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಹೆಚ್ ಡಿಕೆ ವಿರುದ್ಧ ವಾಗ್ದಾಳಿ : ರಾಕ್ ಲೈನ್ ವೆಂಕಟೇಶ್, ಸುಮಲತಾ ನಿವಾಸಕ್ಕೆ ಭದ್ರತೆ
ಈ ವೇಳೆ ಸೋನು ವೇಣುಗೋಪಾಲ್ ಅವರು ರಮ್ಯಾಗೆ, ಮಿಲಿಯನ್ ಡಾಲರ್ ಪ್ರಶ್ನೆ ಒಂದಿದೆ ಎಲ್ಲರೂ ಕೇಳುತ್ತಿದ್ದಾರೆ, ರಮ್ಯಾ ಅವರು ಕೊರೊನ ಲಸಿಕೆ ಪಡೆದುಕೊಂಡ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ನೀಡಿರುವ ರಮ್ಯಾ ನಾನು ಅಮೆರಿಕಾದ ವ್ಯಾಕ್ಸಿನ್ ಗೆ ಕಾಯುತ್ತಾ ಇದ್ದೇನೆ. ನಾನಿನ್ನೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಾನು ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್ನ್ನು ಮೂರು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಪಟ್ಟೆ ಗೊಂದಲ ಶುರುವಾಗಿದೆ. ಮೊಡೆರ್ನಾಗೆ ಸದ್ಯ ಅನುಮತಿ ಸಿಕ್ಕಿದೆ ನನಗೆ ಅದು ಖುಷಿಯ ವಿಚಾರವಾಗಿದೆ.