BIGGBOSS 8 : ‘ನಿಜವಾದ ಆಟ ಇನ್ಮೇಲೆ ಶುರು’.. ಸದಸ್ಯರ ನಿದ್ದೆ ಕೆಡಿಸುವ ಶಪಥ ಮಾಡಿದ ಚಕ್ರವರ್ತಿ..!
ಬಿಗ್ ಬಾಸ್ ಮನೆಗೆ ಪಟಾಕಿಯಂತೆ ಎಂಟ್ರಿಕೊಟ್ಟು ಮನೆ ಮಂದಿಯ ದೃಷ್ಟಿಯಲ್ಲಿ ಮೊದಲನೇ ದಿನವೇ ನೆಗೆಟಿವ್ ಇಮ್ಯಾಂಕ್ಟ್ ಬಿಟ್ಟಿದ್ದ ಚಕ್ರವರ್ತಿ , ಬಂದಾಗಿನಿಂದಲೇ ದೊಡ್ಮನೆಯಲ್ಲಿ ಲೈಮ್ ಲೈಟ್ ನಲ್ಲಿದ್ದಾರೆ. ಎಲ್ಲಾ ಪೋಕಸ್ ಅವರ ಮೇಲೆಯೇ ಇದೆ. ಆದ್ರೆ ಚಕ್ರವರ್ತಿ ಕಂಡ್ರೆ ಸದಸ್ಯರಿಗೆ ಮೊದಲಿನಿಂದಲೂ ಸಹ ಅಷ್ಟಕಷ್ಟೇ. ಇದಕ್ಕೆ ಅವರ ನೇರ ನುಡಿಯೇ ಕಾರಣವೂ ಇರಬಹುದು.
ಬಿಗ್ಬಾಸ್ ಮನೆ ಪ್ರವೇಶ ಮಾಡಿದಕೂಡಲೇ ಎಲ್ಲರೂ ಯೋಚನೆ ಮಾಡುವ ಶೈಲಿ ಬದಲಾಯ್ತು, ಮನೆಯ ಸದಸ್ಯರು ಬೇರೆ ಬೇರೆ ಆಗಿ ಗ್ರೂಪ್ ಮಾಡಿಕೊಂಡರು. ಎಲ್ಲರ ನಡುವೆ ಮನಸ್ತಾಪ ಶುರುವಾಯ್ತು. ಚಕ್ರವರ್ತಿ ಬಂದ ನಂತರ ಮನೆಯ ವಾತಾವರಣವೇ ಬದಲಾಯ್ತು ಅಂತ ಮನೆಯ ಸದಸ್ಯರು ಹೇಳಿದ್ದರು.
ಇನ್ನೂ ಇದರಿಂದ ಸಿಟ್ಟಾಗಿ ಜೈಲು ಸೇರಿರುವ ಚಕ್ರವರ್ತಿ ಸರ್ವಾಧಿಕಾರಿ ಆಗಿ ಮುಂದೆಯೂ ಇರ್ತೀನಿ, ವಾರ ವಾರ ಜೈಲಿಗೆ ಬರ್ತೀನಿ, ಎಲ್ಲರಿಗೂ ಉತ್ತರ ಕೊಡ್ತೀನಿ. ನನ್ನ ಟೋಪಿಯ ಅಳತೆ ಸರಿ ಇಲ್ಲ, ಮುಂದಿನ ಬಾರಿ ಟೋಪಿಯ ಸೈಜ್ ಬೇರೆ ಕೊಡಬೇಕು ಎಂದು ಹೇಳಿದ್ದಾರೆ.
ಅಲ್ಲದೇ ಜೈಲಿನಲ್ಲಿ ತರಕಾರಿ ಹೆಚ್ಚಬೇಕಿತ್ತು. ಇದಕ್ಕೂ ಉತ್ತರಿಸಿ ನಾನು ತರಕಾರಿ ಕಟ್ ಮಾಡಿಕೊಟ್ಟ್ರೆ ಇವರಿಗೆ ಊಟ ಎಂದರೆ ನಾನು ಕಟ್ ಮಾಡಿಕೊಡುವುದಿಲ್ಲ. ನನ್ನ ಜೈಲುವಾಸಕ್ಕೆ ಕಾರಣವಾಗಿರುವ ಪ್ರತಿಯೊಬ್ಬರಿಗೂ ನಿದ್ದೆ ಕೆಡಿಸುತ್ತೇನೆ ಇದು ನನ್ನ ಶಪಥ. ಪ್ರತಿವಾರ ಇನ್ನು ಚಳುವಳಿ ನಡೆಯುತ್ತದೆ ಎಂದು ಚಕ್ರವರ್ತಿ ಹೇಳಿದ್ದಾರೆ.