ಕಿಚ್ಚನ ಮಿಸ್ ಮಾಡಿಕೊಳ್ತಿದ್ದವರಿಗೆ ಗುಡ್ ನ್ಯೂಸ್ – ಈ ವೀಕೆಂಡ್ ನಲ್ಲಿ ಸುದೀಪ್ ದರ್ಶನ..!
ಬೆಂಗಳೂರು: ಕಳೆದ 2 ವರಾಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ವೀಕೆಂಡ್ ಸಂಚಿಕೆಯಿಲ್ಲದೆ ಕಿಚ್ಚನ ನಿತೂಪಣೆಯನ್ನ ತುಂಬಾನೆ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಹಾಗೂ ಕಿಚ್ಚ ಸುದೀಪ್ ಫ್ಯಾನ್ಸ್ ಈಗ ಮತ್ತೊಮ್ಮೆ ಫುಲ್ ಖುಷ್ ಆಗಿದ್ದಾರೆ. ಆರೋಗ್ಯ ಸುಧಾರಿಸಿದ ಪರಿಣಾಮ ಕಿಚ್ಚ ಸುದೀಪ್ ಅವರು ಈ ವಾರ ವೀಕ್ಷಕರ ಮುಂದೆ ಬರಲಿದ್ಧಾರೆ ಎನ್ನಲಾಗಿದೆ. ಈ ಸಂಬಂಧ ಟ್ವೀಟ್ ಮಾಡಿ ಸುಳಿವು ನೀಡಿರುವ ಅಭಿನಯ ಚಕ್ರವರ್ತಿ, ಆರೋಗ್ಯ ಸುಧಾರಿಸಿದ್ದು, ಈ ವಾರ ಬಿಗ್ ಬಾಸ್ ಎಪಿಸೊಡ್ ನಲ್ಲಿ ಕಾಣಿಸಿಕೊಳ್ಳಲು ಕಾತುರರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ ಕಿಚ್ಚ, ವೈದ್ಯ ಡಾ. ವೆಂಕಟೇಶ್ ಹಾಗೂ ಡಾ. ವಿನಯ್ ಅವರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನನ್ನ ಆರೋಗ್ಯ ಸುಧಾರಣೆಗಾಗಿ ಹಲವಾರು ಮಂದಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇದರ ವೀಡಿಯೋಗಳು ನನಗೆ ದೊರಕಿವೆ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.