ದಿವ್ಯಾ ಸುರೇಶ್ ರನ್ನೇ ಮದುವೆಯಾಗ್ತೀರಾ ಎಂದವರಿಗೆ ಲ್ಯಾಗ್ ಮಂಜು ಕೊಟ್ಟ ಉತ್ತರ ಏನು ಗೊತ್ತಾ..?
ಕೊರೊನಾ ಲಾಕ್ ಡೌನ್ ಪರಿಣಾಮ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತು ಹೋಗಿದೆ.. ಈ ಸೀಸನ್ ಅಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿರುವ ಸದ್ಪರ್ಧಿ ಲ್ಯಾಗ್ ಮಂಜು.. ಈ ಸೀಸನ್ ನಲ್ಲಿ ಅವರು ಗೆಲ್ಲುವ ಚಾನ್ಸಸ್ ಹೆಚ್ಚಾಗಿಯೇ ಇತ್ತು.. ಇನ್ನೂ ದೊಡ್ಮನೆಯಲ್ಲಿ ಮನರಂಜನೆ ಹೊರತಾಗಿ ಮಂಜು ಹೆಚ್ಚು ಸುದ್ದಿಯಲ್ಲಿರುತ್ತಿದ್ದಿದ್ದು, ದಿವ್ಯಾ ಸುರೇಶ್ ರ ಜೊತೆಗಿನ ಅವರ ಬಾಂಡಿಂಗ್. ಮನೆಯಲ್ಲಿ ಇಬ್ಬರೂ ಸದಾ ಒಟ್ಟಾಗಿ ಪ್ರಣಯ ಪಕ್ಷಿಗಳಂತೆ ಇರುತ್ತಿದ್ದರು.ಕೆಲವು ಬಾರಿ ದಿವ್ಯಾ ಸುರೇಶ್ ರಿಂದಲೇ ಮಂಜು ಸೈಡ್ ಲೈನ್ ಆಗ್ತಿದ್ದಾರೆಂಬ ಅಭಿಮಾನಿಗಳು ಕಿಡಿಕಾರಿದ್ದೂ ಉಂಟು..
ಇತ್ತೀಚೆಗೆ ಲೈವ್ ನಲ್ಲಿ ಮಂಜು ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ದಿವ್ಯಾ ಸುರೇಶ್ ರನ್ನ ಮದುವೆಯಾಗುವ ಕುರಿತು ಲ್ಯಾಗ್ ಮಂಜುಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಮಂಜು ನಾನು ಯಾಕೆ ದಿವ್ಯಾಳನ್ನು ಮದುವೆಯಾಗಬೇಕು. ನಾನು ಅವಳು ಒಳ್ಳೆಯ ಸ್ನೇಹಿತರು ಅಷ್ಟೆ ಬೇರೆ ಏನೂ ಇಲ್ಲ. ನಾನು ತಮಾಷೆ ಮಾಡುತ್ತಿದ್ದೆ ಅಷ್ಟೆ ಎಂದು ಹೇಳಿದ್ದಾರೆ. ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಆದರೆ ದಿವ್ಯಾ ಸುರೇಶ್ ಅವರನ್ನು ಅಲ್ಲ. ಬೇರೆ ಹುಡುಗಿಯನ್ನು ನೋಡುತ್ತಿದ್ದೇನೆ ಎಂದು ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.