ಮೊದಲ ಇನ್ನಿಂಗ್ಸ್ ನಲ್ಲಿ ಪ್ರಣಯ ಪಕ್ಷಿಗಳಂತೆ ಇದ್ದ ಮಂಜು , ದಿವ್ಯಾ – 2ನೇ ಇನ್ನಿಂಗ್ಸ್ ನಲ್ಲಿ ಫ್ರೆಂಡ್ ಶಿಪ್ ಗುಡ್ ಗೆ ಬೈ ಹೇಳಿದ್ದೇಕೆ..?
ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತು ಹೋಗುವುದಕ್ಕೂ ಮುನ್ನ ಲ್ಯಾಗ್ ಮಂಜು – ದಿವ್ಯಾ ಜೋಡಿ ಮನೆಯಲ್ಲಿ ಪ್ರಣಯಪಕ್ಷಿಗಳಂತೆ ಇದ್ದರು.. ಸದಾ ಜೊತೆಯಾಗಿಯೇ ಕಾಣಿಸಿಕೊಳ್ತಿದ್ದರು.. ಆದ್ರೆ ಇದೀಗ 2ನೇ ಇನ್ನಿಂಗ್ಸ್ ತಮ್ಮ ಫ್ರೆಂಡ್ಶಿಪ್ಗೆ ಗುಡ್ ಬೈ ಹೇಳಿದ್ದಾರೆ.
ಹೌದು. ಬಿಗ್ಬಾಸ್ ನೀಡಿದ ತಳ್ಳುಬಂಡಿ ಟಾಸ್ಕ್ ನಲ್ಲಿ ಕಾಲಿಗೆ ಗಾಯಮಾಡಿಕೊಂಡ ದಿವ್ಯಾ ಸುರೇಶ್ ಗಾಯಕ್ಕೆ ಔಷಧಿ ಹಚ್ಚಿಕೊಂಡ ಬಳಿಕ ಮಂಜು ಬಳಿ ಬಂದು ನಾನು ಗಾಯಮಾಡಿಕೊಂಡು ಒಳಬಂದಾಗ ನೀನು ಕೂತ ಜಾಗದಿಂದ ಎದ್ದು ಬಂದಿಲ್ಲ ಎಂದು ತಕಾರರು ಎತ್ತಿದ್ದಾರೆ.
ಮಂಜ ನೀನು ಫ್ರೆಂಡ್ಶಿಪ್ಗೆ ಬೆಲೆ ಕೊಡುವವನಾಗಿದ್ದರೆ ಎದ್ದು ಬರುತ್ತಿದ್ದೆ ನೀನು ಬರಲಿಲ್ಲ ಎಂದು ಮಂಜನಿಗೆ ದಿವ್ಯಾ ಹೇಳಿದ್ದಾರೆ. ಆಗ ನಿಧಿ ನಾನು ಮಂಜನಿಗೆ 2 ಬಾರಿ ಎದ್ದು ಹೋಗು ನೋಡಿ ಸಮಾಧಾನ ಮಾಡಿ ಬಾ ಎಂದಿದ್ದೆ. ಆದರೆ ಮಂಜ ನೀನು ಸುಮ್ಮನಿರಮ್ಮ ಎಂದು ನನಗೆ ಹೇಳಿದ್ದ ಎಂದು ತಿಳಿಸಿದ್ದಾರೆ. ಇದನ್ನು ಕೇಳಿಸಿಕೊಂಡ ದಿವ್ಯಾ ಥೂ.. ಅಂತ ಉಗಿದು ನಿನಗು ನಿನ್ನ ಫ್ರೆಂಡ್ಶಿಪ್ಗೂ ಗುಡ್ ಬೈ ಅಂದಿದ್ದಾರೆ.
ಇದಕ್ಕೆ ಮಂಜು ನಮಗೆ ಎದೆ ಮೇಲೆ ಒದಿತೀರಿ ಅಂದ ಮೇಲೆ ನಿಮಗೆ ದೇವರು ಸರಿಯಾಗಿ ಶಿಕ್ಷೆ ಕೊಟ್ಟಿದ್ದಾನೆ ಎಂದಿದ್ದಾರೆ. ಈ ಮಾತಿಗೆ ದಿವ್ಯಾ ಕೂತ್ಕೂಳಯ್ಯ ಸುಮ್ಮನೆ ನೊಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ಒಟ್ನಲ್ಲಿ ಬೆಸ್ಟ್ ಫ್ರೆಂಡ್ಸ್ ಇದೀಗ 2ನೇ ಇನ್ನಿಂಗ್ಸ್ ನಲ್ಲಿ ವೈರಿಗಳಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ..