BIGGBOSS 8 : ಎಲಿಮಿನೇಷನ್ ಪ್ರ್ಯಾಂಕ್ – ಬಿಕ್ಕಿ ಬಿಕ್ಕಿ ಅತ್ತ ಸಂಬರಗಿ
ಕೊರೊನಾ ಲಾಕ್ ಡೌನ್ ನಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ಬಿಗ್ ಬಾಸ್ ಕನ್ನಡದ ಸೀಸನ್ 8 ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ.. ಈಗಾಗಲೇ ಹೊರಗಡೆ ಹೋಗಿದ್ದ ಸ್ಪರ್ಧಿಗಳು ಯಾರು ಹೇಗೆ, ಹಿಂದೆ ನಮ್ಮ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಇದನ್ನೆಲ್ಲಾ ನೋಡಿಕೊಂಡು , ಆಗ ೇನು ತಪ್ಪು ಮಾಡಿದ್ವಿ ಈಗ ಅದನ್ನ ಸರಿಪಡಿಸಿಕೊಳ್ಳುವುದಕ್ಕೆ ಮಾಡಬೇಕಾದ ಸ್ಟ್ರಾಟರ್ಜಿ ಏನು ಇದನ್ನೆಲ್ಲಾ ಯೋಚನೆ ಮಾಡಿಕೊಂಡೇ ಮತ್ತೆ ಮನೆಗೆ ಕಾಲಿಟ್ಟಿದ್ದಾರೆ..
ಹಾಗಂತ ಬಿಗ್ ಬಾಸ್ ಕೂಡ ಅಷ್ಟು ಸುಲಭಕ್ಕೆ ಸ್ಪರ್ಧಿಗಳನ್ನ ಬಿಡೋದಿಲ್ಲ.,. ಲಠಿಣ ಟಾಸ್ಕ ಗಳ ಜೊತೆಗೆ ಟ್ವಿಸ್ಟ್ ಗಳನ್ನ ಕೊಡುತ್ತಾ ಸ್ಪರ್ಧಿಗಳ ತಾಳ್ಮೆ , ಜಾಣ್ಮೆ ಎಲ್ಲವನ್ನೂ ಪರೀಕ್ಷೆ ಮಾಡುತ್ತಿದೆ.. ಇದೀಗ ಬಿಗ್ ಬಾಸ್ ಎಲಿಮಿನೇಟ್ ಆಟ ಸ್ಪರ್ಧಿಗಳನ್ನೆಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.
ಹೌದು ಬಿಗ್ ಬಾಸ್ ಪ್ರಶಾಂತ್ ಸಂಬರಗಿಯವ ಮೇಲೆ ಎಲಿಮಿನೇಟ್ ಪ್ರ್ಯಾಂಕ್ ಮಾಡಿದ್ದು, ಸಂಬರಗಿ ಅವರನ್ನ ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿದೆ.. ಮತ್ತೊಂದೆಡೆ ಸ್ಪರ್ಧಿಗಳು ಪ್ರೇಕ್ಷಕರೂಶಾಕ್ ಆಗಿದ್ದಾರೆ.. ಬಿಗ್ ಬಾಸ್ ಕೊಟ್ಟ ಕೌಂಟರ್ ಡೋಸ್ ಗೆ ಸ್ಪರ್ಧಿಗಳು ಸುಸ್ತಾಗಿದ್ದಾರೆ..
ಆರಂಭದಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ಈ ಬಗ್ಗೆ ತಿಳಿಸಿದ್ದರು. ಬಳಿಕ ಇದನ್ನು ಮನೆಯವರಿಗೂ ತಿಳಿಸಿದ್ದಾರೆ. ಆದರೆ ಈ ವೇಳೆ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್‍ನ್ನು ಬಿಗ್ ಬಾಸ್ ನೀಡಿದ್ದರು. ಸ್ಪರ್ಧಿಗಳಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರಲ್ಲೂ ಆತಂಕ, ದುಗುಡ ಎದುರಾಗಿದೆ.
ಈ ವಾರ ಯಾರೂ ಎಲಿಮಿನೇಟ್ ಆಗಿಲ್ಲ, ಪ್ರಶಾಂತ್ ಸಂಬರಗಿ ಎಲಿಮಿನೇಟ್ ಕೂಡ ಪ್ರ್ಯಾಂಕ್ ಎಂದು ಬಿಗ್ ಬಾಸ್ ಈಗಾಗಲೇ ಖಚಿತಪಡಿಸಿದ್ದಾರೆ.
ಹೌದು ಪ್ರಶಾಂತ್ ಸಂಬರಗಿ ಮನೆಯಲ್ಲಿದ್ದರೂ ಇನ್‍ವಿಸಿಬಲ್, ಯಾರಿಗೂ ಕಾಣಲ್ಲ. ಸ್ಪರ್ಧಿಗಳು ಅವರಿಲ್ಲ ಎಂದೇ ಭಾವಿಸಿ ಆಟವಾಡಬೇಕು ಎಂದು ಷರತ್ತು ವಿಧಿಸಿದ್ದರು. ಹೀಗಾಗಿ ಪ್ರಶಾಂತ್ ಸಂಬರಗಿ ಪರದಾಡುವಂತಾಗಿತ್ತು. ಯಾಕೆ ಮಾತನಾಡಿಸುತ್ತಿಲ್ಲ ಎಂದು ಸ್ಪರ್ಧಿಗಳೆಲ್ಲರನ್ನೂ ಸಂಬರಗಿ ಹಿಡಿದು ಕೇಳುತ್ತಿದ್ದರು. ಆದರೆ ಯಾರೂ ಉತ್ತರಿಸುವ ಸ್ಥಿತಿಯರಲಿಲ್ಲ.
ಎಲ್ಲರನ್ನೂ ಮಾತನಾಡಿಸಿ ಸುಸ್ತಾದ ಪ್ರಶಾಂತ್ ಸಂಬರಗಿ, ಕೊನೆಗೆ ಶುಭ ಪೂಂಜಾ ಅವರನ್ನು ಮಾತನಾಡಿಸಿ, ಎಲ್ಲರೂ ಯಾಕೆ ಹೀಗೆ ಮಾಡುತ್ತಿದ್ದೀರಿ, ಇಷ್ಟೇನಾ ಸ್ನೇಹ, ಪ್ರೀತಿ, ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಶುಭಾ ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆದರೆ ಶುಭ ಮಾತ್ರ ಏನೂ ಮಾತನಾಡಿಲ್ಲ, ಹೀಗಾಗಿ ಪ್ರಶಾಂತ್ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕೊನೆಗೆ ಬಿಗ್ ಬಾಸ್ ಪ್ರಶಾಂತ್ ಸಂಬರಗಿ ಅನುಮಾನವನ್ನು ಪರಿಹಿರಿಸಿ ಇದು ಪ್ರ್ಯಾಂಕ್ ಎಂದು ತಿಳಿಸಿದ್ದಾರೆ. ಈ ವಿಚಾರ ತಿಳಿಯತ್ತಿದ್ದಂತೆ ಸಂಬರಗಿ ನಕ್ಕಿದ್ದರೆ ಚಂದ್ರಚೂಡ್, ಅರವಿಂದ್, ದಿವ್ಯಾ, ವೈಷ್ಣವಿ, ಶಮಂತ್ ಸಂಬರಗಿಯನ್ನು ಅಪ್ಪಿಕೊಂಡಿದ್ದಾರೆ.