ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ – ಮೊದಲ ದಿನವೇ ಬಿದ್ದು ಒದ್ದಾಡಿ ಕಿತ್ತಾಡಿಕೊಂಡ ದಿವ್ಯಾ ಸುರೇಶ್, ಉರುಡುಗ
ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿದ್ದ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8 ಮತ್ತೆ ಗ್ರ್ಯಾಂಡ್ ಸಂಚಿಕೆ ಮೂಲಕ ಈಗಾಗಕೇ ಆರಂಭವಾಗಿದೆ. ಬಿಗ್ ಬಾಸ್ ಮನೆಯಲ್ಲಿರುವ ಮುಖ್ಯದ್ವಾರದ ಮೂಲಕ ಸ್ಪರ್ಧಿಗಳು ಒಳಗೆ ಹೋಗುವುದು ಹಾಗೂ ಎಲಿಮಿನೇಟ್ ಆದಾಗ ಹೊರಗೆ ಬರುತ್ತಿದ್ದರು. ಆದರೆ ಈ ಸಲ ಸ್ಪರ್ಧಿಗಳನ್ನು ಬೇರೆ ಬೇರೆ ದ್ವಾರಗಳ ಮೂಲಕ ಮನೆ ಒಳಗೆ ಕಳುಹಿಸಲಾಗಿದೆ.
ಆರಂಭದಲ್ಲೇ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ನಡುವೆ ಬಿಗ್ ಫೈಟ್ ನಡೆದಿದೆ.. ಆಟದ ವಿಚಾರವಾಗಿ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಮಧ್ಯೆ ಫುಲ್ ಜಡೆ ಜಗಳ ನಡೆದಿದ್ದು, ಇಬ್ಬರೂ ಎದ್ದು ಬಿದ್ದು ಹೊರಳಾಡಿ, ಒಬ್ಬರ ಮೇಲೊಬ್ಬರು ಬಿದ್ದು ಹೊಡೆದಾಡಿಕೊಂಡಿದ್ದಾರೆ. ಈ ಫೈಟ್ ನಲ್ಲಿ ದಿವ್ಯಾ ಸುರೇಶ್ ಗೆದ್ದಿದ್ದಾರೆ. ಬಳಿಕ ಬಿಗ್ ಬಾಸ್ ದಿವ್ಯಾ ಸುರೇಶ್ ಅವರನ್ನು ಲೀಡರ್ಸ್ ತಂಡದ ನಾಯಕಿ ಎಂದು ಘೋಷಿಸಿದ್ದಾರೆ.
ಕಿಚ್ಚ ಸುದೀಪ್ ದಿವ್ಯಾ ಉರುಡುಗಗೆ ಆಟಗಳನ್ನ ನೀಡಿದ್ದರು.. ಮುಂದೆ ಎಂಟ್ರಿ ಕೊಡಲಿರುವ ಸ್ಪರ್ಧಿ ಯಾರು ಎಂದು ಗೆಸ್ ಮಾಡಬೇಕೆಂದು ಸೂಚಿಸಿದ್ದರು. ಮತ್ತೊಂದು ಟೀಮ್ ಡಿವಿಷನ್ ಸಲುವಾಗಿ ಒಬ್ಬರ ಎದುರು ಮತ್ತೊಬ್ಬರು ಆಡುವ ಆಟ. ಮೊದಲನೇ ಆಟ ಗೆಸ್ ಮಾಡುವುದರಲ್ಲಿ ಜಯ ಗಳಿಸಿದರೆ ನೀವು ಯಾವಾಗ ಬೇಕಾದರೂ, ಬಿಗ್ ಬಾಸ್ ಮನೆಯೊಳಗೆ ತಿಂಡಿ ಅಥವಾ ನಿಮಗಿಷ್ಟವಾದ ಆಹಾರ ಪದಾರ್ಥವನ್ನು ಪಡೆಯಬಹುದು ಎಂದು ಹೇಳುತ್ತಾರೆ.
ಕಿಚ್ಚನ ಪ್ರಶ್ನೆಗೆ ದಿವ್ಯಾ ಉರುಡುಗ ಸರಿಯಾದ ಉತ್ತರ ನೀಡುತ್ತಾರೆ. ಅದರಂತೆ ಮುಂದಿನ ಸ್ಪರ್ಧಿಯಾಗಿ ದಿವ್ಯಾ ಸುರೇಶ್ ಬಿಗ್ ಬಾಸ್ ವೇದಿಕೆಗೆ ಆಗಮಿಸುತ್ತಾರೆ. ಆಗ ಸುದೀಪ್ ನೀವಿಬ್ಬರು ಮನೆಯೊಳಗೆ ಹೋದ ಮೇಲೆ ಒಂದು ಪಂದ್ಯ ನಡೆಯುತ್ತದೆ. ನಿಮ್ಮಿಬ್ಬರ ಕೈಗೆ ಬಿಂದಿ ಪಾಕೆಟ್‍ನ್ನು ಕೊಡಲಾಗುತ್ತದೆ. ಅದರಲ್ಲಿನ ಒಂದು ಬಿಂದಿಯನ್ನು ಎದುರಾಳಿಯ ಹಣೆಗೆ ಅಂಟಿಸಬೇಕು ಎಂದು ಹೇಳುತ್ತಾರೆ. ಯಾರು ಮೊದಲು ಎದುರಾಳಿಯ ಹಣೆಗೆ ಬಿಂದಿಯನ್ನು ಅಂಟಿಸುತ್ತಾರೋ ಅವರು ಪಂದ್ಯ ಗೆಲ್ಲುತ್ತಾರೆ ಎಂದು ಹೇಳಿ ಒಳಗೆ ಕಳುಹಿಸುತ್ತಾರೆ. ಬಳಿಕ ಮನೆಯ ಒಳಗೆ ರೋಚಕ ಫೈಟಿಂಗ್ ಬಳಿಕ ದಿವ್ಯಾ ಸುರೇಶ್ ಗೆಲುವು ಸಾಧಿಸಿದ್ದಾರೆ.