BIGGBOSS 8 : ವೈಲೆಂಟ್ ಆಗಿ  ಪ್ರಶಾಂತ್ ಮೇಲೆ ಕೈ ಎತ್ತಿದ ವೈಷ್ಣವಿ..?

1 min read

BIGGBOSS 8 : ವೈಲೆಂಟ್ ಆಗಿ  ಪ್ರಶಾಂತ್ ಮೇಲೆ ಕೈ ಎತ್ತಿದ ವೈಷ್ಣವಿ..?

 ಸದಾ ಸೈಲೆಂಟ್ ಆಗಿಯೇ ಹೆಚ್ಚು ಮಾತನಾಡದೇ ಕಿರಿಕ್ ಮಾಡಿಕೊಳ್ಳದೇ ತಾವಾಯ್ತು ತಮ್ಮ ಪಾಡಾಯ್ತು ಇರೋ ಸೈಲೆಂಟ್ ಕಿಲ್ಲರ್ ವೈಷ್ಣವಿ ಆಗಾಗ ಮಾತ್ರ ವೈಲೆಂಟ್ ಆಗ್ತಾರೆ.. ಇದೀಗ ಬಿಗ್ ಬಾಸ್ ನೀಡಿದ್ದ ಟಾಸ್ಕ್  ವೇಳೆ ಪ್ರಶಾಂತ್ ಸಂಬರಗಿಯ ಮೇಲೆ ಕೈ ಎತ್ತಿದ್ದಾರೆ..  ಹೌದು.. ಅಷ್ಟಕ್ಕೂ ಸೈಲೆಂಟ್ ಕಿಲ್ಲರ್ ವೈಷ್ಣವಿ ವೈಲೆಂಟ್ ಆಗಿದ್ದು ಯಾಕೆ..?  ವೈಷ್ಣವಿ ಗೌಡ ಪ್ರಶಾಂತ್ ಮೇಲೆ ಕೈ ಎತ್ತಿದ್ದೇಕೆ..?   ಅದ್ರಲ್ಲೂ ಇದೇ ಮೊದಲ ಬಾರಿಗೆ ಅವರು ಕೋಪದ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ ಅನ್ನೋದು ವೀಕ್ಷಕರು ಅಭಿಪ್ರಾಯ.

ಬಿಗ್‍ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗೋಕೆ ನೀಡಿದ್ದ ನಾನಾ – ನೀನಾ ಟಾಸ್ಕ್ ವೇಳೆ ವೈಷ್ಣವಿ ತಾಳ್ಮೆ ಕಳೆದುಕೊಂಡಿದ್ದಾರೆ.. ಈ ಟಾಸ್ಕ್ ಅಡಿಯಲ್ಲಿ ಸಾಕಷ್ಟು ಸ್ಪರ್ಧೆಗಳನ್ನು ನೀಡಲಾಗುತ್ತಿದೆ. ಏನಾಗಲೀ ಮುಂದೆ ಸಾಗು ನೀ ಆಟದಲ್ಲಿ ಸ್ಪರ್ಧಿಗಳು ಬೆನ್ನಿಗೆ ಗೋಣಿಚೀಲ ಕಟ್ಟಿಕೊಂಡು ವೃತ್ತಗಳ ಒಳಗೆ ಓಡಬೇಕು. ಮುಂದಿನ ಸದಸ್ಯರ ಚೀಲವನ್ನು ಖಾಲಿ ಮಾಡಬೇಕು. ಈ ವೇಳೆ ವೈಷ್ಣವಿ ಹಿಂದೆ ಇದ್ದ ಪ್ರಶಾಂತ್ ಚೀಲವನ್ನು ಗಟ್ಟಿಯಾಗಿ ಎಳೆದಿದ್ದಾರೆ. ಇದು ವೈಷ್ಣವಿ ಅವರ ಕೋಪಕ್ಕೆ ಕಾರಣವಾಗಿದೆ.biggboss kannada 8 saakshatv

ಆಗ ಸಿಟ್ಟಾದ ವೈಷ್ಣವಿ ಏಯ್, ನೋಡಿ ಪ್ರಶಾಂತ್ ಸಂಬರಗಿ ಏನು ಮಾಡ್ತಿದ್ದಾರೆ ಅಂತೆಲ್ಲ ಕ್ಯಾಪ್ಟನ್‍ಗೆ ದೂರು ಹೇಳಿದ್ದರು. ನೀವು ಎಳೆದರೆ ನನ್ನ ಕತ್ತಿಗೆ ಸಮಸ್ಯೆ ಆಗುತ್ತಿದೆ ಎಂದು ಪ್ರಶಾಂತ್‍ಗೆ ವೈಷ್ಣವಿ ಎಚ್ಚರಿಕೆ ಕೂಡ ನೀಡಿದ್ದರು. ಪದೇ ಪದೇ ಆಟದ ನಿಯಮದ ಉಲ್ಲಂಘನೆ ಮಾಡಿದರೆ ಔಟ್ ಎಂದು ಹೇಳುವೆ ಎಂದು ಪ್ರಶಾಂತ್‍ಗೆ ಅನೇಕ ಬಾರಿ ಕ್ಯಾಪ್ಟನ್ ದಿವ್ಯಾ ಸುರೇಶ್ ವಾರ್ನಿಂಗ್ ಮಾಡಿದ್ದರು.

ಮಾತಿನಲ್ಲೇ ಏಟು ಕೊಡೋ ಸೈಲೆಂಟ್ ಕಿಲ್ಲರ್ ವೈಷ್ಣವಿ  ಕೋಪ ನೋಡಿ ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ..   ಆಟದ ವೇಳೆ ಪ್ರಶಾಂತ್ ಕೂಡ ಶುಭಾ ಪೂಂಜಾಗೆ ತೊಂದರೆ ಮಾಡಿದ್ದರಂತೆ. ವೈಷ್ಣವಿ ಒಮ್ಮೆ ಆಟದಿಂದ ಹೊರಗಡೆ ಹೋದಾಗ ದಿವ್ಯಾ ಸುರೇಶ್ ಮತ್ತೆ ಆಟ ಆಡಿ ಅಂತ ಹೇಳಿದ್ದಕ್ಕೆ ವೈಷ್ಣವಿ ಮತ್ತೆ ಆಟಕ್ಕಿಳಿದಿದ್ದರು. ಈ ಆಟಕ್ಕೆ ಸಂಬಂಧಪಟ್ಟಂತೆ ಚಕ್ರವರ್ತಿ ಚಂದ್ರಚೂಡ್, ಶಮಂತ್ ಬ್ರೊ ಗೌಡ, ಮಂಜು ಪಾವಗಡ, ಕೆಪಿ ಅರವಿಂದ್, ಶುಭಾ ಪೂಂಜಾ ಕೂಗಾಡಿದ್ದರು. ಪ್ರಶಾಂತ್ ಹೇಳೋದು ಬಂದು, ನಡವಳಿಕೆ ಒಂದು, ಜೆಂಟಲ್‍ಮ್ಯಾನ್ ರೀತಿ ಆಡ್ತಿದೀನಿ ಅಂತ ಹೇಳುತ್ತಿದ್ದಾರೆ ಎಂದು ವೈಷ್ಣವಿ, ಶುಭಾ ಮುಂದೆ ಹೇಳಿಕೊಂಡರು.

ವೈಷ್ಣವಿ ಗೌಡ ನನ್ನ ಮೇಲೆ ಕೂಗಾಡಿ ಕೈ ಎತ್ತಿದರು, ನನಗೆ ವೈಷ್ಣವಿನಾ ಇದು ಎಂದು ಶಾಕ್ ಆಗಿಬಿಟ್ಟೆ ಎಂದು ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ದಿವ್ಯಾ ಉರುಡುಗ ಬಳಿ ಪ್ರಶಾಂತ್ ಹೇಳಿಕೊಂಡಿದ್ದಾರೆ. ಹುಡುಗಿ ನಮಗೆ ಹೊಡೆದರೆ ಇನ್ಸಲ್ಟ್ ಆಗತ್ತೆ ಎಂದು ಕೂಡ ಪ್ರಶಾಂತ್ ಹೇಳಿದ್ದಾರೆ.  ಈ ಬಗ್ಗೆ ಮಾತನಾಡಿರೋ ವೈಷ್ಣವಿ ಪ್ರಶಾಂತ್ ಸಂಬರಗಿ ಚೀಲ ತೂತು ಮಾಡೋದನ್ನು ಬಿಟ್ಟು ಎಳೆಯುತ್ತಿದ್ದಾರೆ ಎಂದು ವೈಷ್ಣವಿ ಆರೋಪ ಮಾಡಿದ್ದರು. ನಾನು ಮನುಷ್ಯಳು, ಹೀಗಾಗಿ ಕೋಪ ಬಂತು ಎಂದು ವೈಷ್ಣವಿ ಹೇಳಿದ್ದಾರೆ. ಒಟ್ಟಾರೆ ಇಷ್ಟು ದಿನ ಮೌನವಾಗಿದ್ದ ವೈಷ್ಣವಿ ಇದೀಗ ತಾಳ್ಮೆ ಕಳೆದುಕೊಂಡು ಕೈ ಎತ್ತುವ ಮಟ್ಟಕ್ಕೆ ಸಿಟ್ಟು ಮಾಡಿಕೊಂಡಿರೋದು ಎಲ್ರನ್ನೂ ಶಾಕ್ ಆಗಿಸಿದೆ.

 

ಅಶ್ಲೀಲ ಸಿನಿಮಾಗಳ ನಿರ್ಮಾಣ – ಅಶ್ಲೀಲ ವಿಡಿಯೋಗಳ ಕುರಿತಾಗಿ ರಾಜ್ ಕುಂದ್ರಾ ಮಾಡಿದ್ದ ಹಳೆ ಟ್ವೀಟ್ ವೈರಲ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd