BIGGBOSS 8 – ಯಾರು ಗೊತ್ತಾ ಈ ವಾರ ಮನೆಯಿಂದ ಎಕ್ಸಿಟ್ ಆಗುವ ಸ್ಪರ್ಧಿ..?
ಬೆಂಗಳೂರು: ಬಿಗ್ ಬಾಸ್ 8 ನೇ ಆವೃತ್ತಿಯಲ್ಲಿ ಈಗಾಗಲೇ ಮನೆಯಿಂದ 4 ಮಂದಿ ಎಕ್ಸಿಟ್ ಆಗಿದ್ದಾರೆ. ಮೊದಲ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ, 2ನೇ ವಾರ ನಿರ್ಮಲಾ, 3ನೇ ವಾರ ಗೀತಾ ಬಾರತಿ ಭಟ್ , 4ನೇ ವಾರ ಚಂದ್ರಕಲಾ ಮೋಹನ್ ಹೊರ ಹೋಗಿದ್ದಾರೆ. ಇಂದು 5ನೇ ವಾರದ ಎಲಿಮಿನೇಷನ್ ಇದ್ದು, ಮನೆಯಿಂದ ಆಚೆ ಹೋಗುವ 5ನೇ ಸ್ಪರ್ಧಿ ಯಾರು ಎಂಬ ಕುತೂಹಲ ಜೋರಾಗಿದೆ.
ಇಂದು ರಾತ್ರಿ ಕಿಚ್ಚ ಸುದೀಪ್ ಆ 5ನೇ ಸ್ಪರ್ಧಿಯ ಹೆಸರನ್ನ ರಿವೀಲ್ ಮಾಡಲಿದ್ದಾರೆ. ಆದ್ರೆ ಸಾಕಷ್ಟು ವದಂತಿಗಳು, ನೆಟ್ಟಿಗರ ಅಭಿಪ್ರಾಯಗಳನ್ನ ನೋಡೋದಾದ್ರೆ ಈ ಬಾರಿ ಮನೆಯಿಂದ ಹೊರ ಹೋಗುವ ಸ್ಪರ್ಧಿ ಅಶ್ವಥ್ ಶಂಕರ್ ಇರಬಹುದಾ ಎಂಬ ಚರ್ಚೆಗಳು ಜೋರಾಗಿವೆ. ಮೊದಲ 4 ವಾರ ಮಹಿಳೆಯರೇ ಎಲಿಮಿನೇಟ್ ಆಗಿದ್ದಾರೆ. ಈ ವಾರ ಬಹುಷಃ ಪುರುಷ ಸದಸ್ಯ ಹೊರನಡೆಯುವ ಚಾನ್ಸ್ ಇದ್ದು, ಅದು ಶಂಕರ್ ಅಶ್ವಥ್ ಅವರೇ ಇರಬಹುದಾ ಎಂಬ ಚರ್ಚೆಗಳು ತುಂಬಾನೆ ನಡೆಯುತ್ತಿವೆ. ಆದ್ರೆ ಮನೆಯಿಂದ ಹೊರಗಡೆ ಹೋಗುವ 5ನೇ ಸ್ಪರ್ಧಿ ಯಾರು ಅನ್ನೋದನ್ನತಿಳಿಯೋಕೆ ಇಂದು ರಾತ್ರಿ 9.30 ವರೆಗೂ ಕಾಯಲೇಬೇಕಾಗಿದೆ.
50 % ಸೀಟಿಂಗ್ ನಿರ್ಬಂಧದಲ್ಲಿ ಸಡಿಲಿಕೆ – ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಅಪ್ಪು..!








