50 % ಸೀಟಿಂಗ್ ನಿರ್ಬಂಧದಲ್ಲಿ ಸಡಿಲಿಕೆ – ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಅಪ್ಪು..!

1 min read

50 % ಸೀಟಿಂಗ್ ನಿರ್ಬಂಧದಲ್ಲಿ ಸಡಿಲಿಕೆ – ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಅಪ್ಪು..!

ಸಿನಿಮಾರಂಗದ ಸೆಲೆಬ್ರಟಿಗಳ ಆಕ್ರೋಶಕ್ಕೆ ಮಣಿದ ಸರ್ಕಾರ ಸಿನಿಮಾ ಮಂದಿರಗಳಲ್ಲಿ ವಿಧಿಸಿದ್ದ 50 % ಸೀಟಿಂಗ್ ನಿರ್ಬಂಧವನ್ನ ಹಿಂಪಡೆದಿದೆ. ಥಿಯೇಟರ್ ಗಳಲ್ಲಿ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಸರ್ಕಾರದ ವಿರುದ್ಧ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಯಶ್, ದುನಿಯಾ ವಿಜಿ, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸರ್ಕಾರ ತನ್ನ ನಿಯಮವನ್ನ ಸಡಿಲಿಸಿದ್ದು, ಮತ್ತೆ ಸಿನಿಮಾಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು ರೂಲ್ಸ್ ನಲ್ಲಿನ ಬದಲಾವಣೆಂತೆ 7 ನೇ ತಾರಿಕಿನ ವರೆಗೂ 100 % ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಇತ್ತ ಸರ್ಕಾರ ನಡೆಯಿಂದ ಫುಲ್ ಖುಷ್ ಆಗಿರುವ ಪವರ್ ಸ್ಟಾರ್ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸಿದ್ಧಾರೆ. ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ‘ ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕದ ಸರ್ಕಾರದವರು, ಎಲ್ಲಾ ಪ್ರೀತಿಯ ಅಭಿಮಾನಿಗಳು, ಕರ್ನಾಟಕದ ಜನತೆ, ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.

ನಮಗೆ 3-4 ದಿನ ಕಾಲಾವಖಾಶ ಸಿಕ್ಕಿದೆ. ಈಗಾಗಲೇ ನೀವೇಲ್ಲರೂ ಕುಟುಂಬ ಸಮೇತರಾಗಿ ಸಿನಿಮಾ ನೋಡಿದ್ದೀರಿ, ಇಷ್ಟ ಪಟ್ಟಿದ್ದೀರಿ. ಈ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ್ದೀರಿ. ಅದೇ ರೀತಿ ನಾಳೆಯಿಂದ ಮೂರು ದಿನ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ಇದೆ. ಹೀಗಾಗಿ ತಾವೆಲ್ಲರೂ ಹುಷಾರಾಗಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಿನಿಮಾ ನೋಡಿ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಎಂದು ಹೇಳಿದ್ದಾರೆ.

ಇಂದು ನಟ ಪುನಿತ್ ನೇತೃತ್ವದಲ್ಲಿ ಯುವರತ್ನ ಚಿತ್ರತಂಡ ಸಿಎಂ ಬಿಎಸ್ವೈ ಭೇಟಿ ಮಾಡಿ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಆದೇಶ ಹೊರಬಿದ್ದಿದೆ.

ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಗೂ ಕೊರೊನಾ ಪಾಸಿಟಿವ್..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd