ಕನ್ನಡದ ಬಿಗ್ ಬಾಸ್ ಅಧಿಕೃತವಾಗಿ ಅನೌನ್ಸ್…! ಆರಂಭ ಯಾವಾಗಿನಿಂದ ಗೊತ್ತಾ..?

1 min read

ಕನ್ನಡದ ಬಿಗ್ ಬಾಸ್ ಅಧಿಕೃತವಾಗಿ ಅನೌನ್ಸ್…! ಆರಂಭ ಯಾವಾಗಿನಿಂದ ಗೊತ್ತಾ..?

ಬಹುತೇಕ ಬೇರೆ ಎಲ್ಲಾ ಭಾಷೆಗಳಲ್ಲಿಯೂ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾದ್ರೂ ಕನ್ನಡದಲ್ಲಿ ಮಾತ್ರ ಈ ವರ್ಷ ತಡವಾಗಿಹೋಯ್ತು. ಆದ್ರೆ ಇತ್ತೀಚೆಗೆ ಮತ್ತೆ ಬಿಗ್ ಬಾಸ್ ಕನ್ನಡಸೀಸನ್ 8 ರ ಕಾರ್ಯ ಚಟುವಟಿಕೆಗಳು ಆರಂಭವಾಗಿದ್ದವು. ಆದ್ರೆ ಅಧಿಕೃತವಾಗಿ ಯಾವಾಗ ಬರಲಿದೆ ಎಂಬ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 8 ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ಅಧಿಕೃತವಾಗಿ ತಂಡ ಮಾಹಿತಿ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಫೋಟೋ ಹಾಕಿ ಬರೆದುಕೊಂಡಿರುವ ಪರಮೇಶ್ವರ್, ಕನ್ನಡದ ಬಿಗ್ ಬಾಸ್ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಬಿಸ್ ಬಾಸ್ ಪ್ರಾರಂಭಕ್ಕೆ ಹಲವಾರು ಸಿದ್ಧತೆಗಳು ನಡೆಯುತ್ತಿದ್ದು, ಇಂದಿನಿಂದ ಪ್ರೋಮೋ ಶೂಟಿಂಗ್ ಕೂಡ ಶುರುವಾಗಿದೆ. ಶೂಟಿಂಗ್ನಲ್ಲಿ ಸುದೀಪ್ ಕೂಡ ಭಾಗಿಯಾಗಿದ್ದು, ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ವಾಟ್ಸಾಪ್ ಕಲರ್ ಅಲ್ಲ.. ನಿಮ್ಮ ಕಲರ್ ಚೇಂಜ್ ಆಗ್ಬಿಡುತ್ತೆ ಹುಷಾರ್..!

ಇನ್ನೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ದೊಡ್ಮನೆ ಎಂಟ್ರಿಯಾಗಲಿದ್ದಾರೆ ಎಂಬ ಹಲವಾರು ಗಾಸಿಫ್ ಗಳು ಸಹ ಹರಿದಾಡೋದಕ್ಕೆ ಶುರುವಾಗಿಬಿಟ್ಟಿದೆ. ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಡ್ರೋನ್ ಪ್ರತಾಪ್, ಕೆಲ ಟಿಕ್ ಟಾಕ್ ಸ್ಟಾರ್ ಗಳಾದ ಬಿಂದು ಗೌಡ, ಸೋನು ಶ್ರೀನಿವಾಸ್ ಗೌಡ, ಖ್ಯಾತ ನಿರೂಪಕಿ ಹೀಗೆ ಹಲವರ ಹೆಸರುಗಳು ಕೇಳಿಬರುತ್ತಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd