ದೊಡ್ಮನೆಯಲ್ಲಿ “ಹುಡುಗಿನ ಪಟಾಯಿಸೋಕೆ ಸಂಬರಗಿ ಟಿಪ್ಸ್”
ಹುಡುಗಿನ ಪಟಾಯಿಸೋದು ಹೇಗೆ ಗೊತ್ತಾ..? ಅದನ್ನ ಬಿಗ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಶಮಂತ್ ಗೆ ಹೇಳಿಕೊಟ್ಟಿದ್ದಾರೆ. ಹುಡುಗಿರನ್ನ ಪಟಾಯಿಸುವುದು ಹೇಗೆ ಎಂಬುವುದರ ಬಗ್ಗೆ ಸಂಬರಗಿ ನೀಡಿದ ಕೆಲ ಟಿಪ್ಸ್ ಗಳನ್ನ ಶಮಂತ್ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರನ್ನು ಪಟಾಯಿಸಲು ಏನು ಮಾಡಬೇಕು ಎಂಬ ಟಾಪಿಕ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ.
ಹೌದು.. ಕಿಚ್ಚನ ಮುಂದೆ ಪ್ರಶಾಂತ್ ಸಂಬರ್ಗಿ ಹುಡುಗಿಯನ್ನು ಪಟಾಯಿಸುವುದು ಹೇಗೆ ಎಂದು ನೀಡಿದ ಕೆಲವು ಟಿಪ್ಸ್ ಗಳನ್ನು ಶಮಂತ್ ರಿವೀಲ್ ಮಾಡಿದ್ದಾರೆ.
ಶಮಂತ್ ಒಮ್ಮೆ ಪ್ರಶಾಂತ್ ಅವರ ಬಳಿ ಬಂದು ದಿವ್ಯಾ ಸುರೇಶ್ ಯಾವಾಗಲೂ ನನ್ನನ್ನು ಕೆಟ್ಟ ದೃಷ್ಠಿಯಲಿಲ್ಲೇ ನೋಡುತ್ತಾಳೆ, ನಾನು ಅವರಿಗೆ ಫ್ರೆಂಡ್ ಆಗಬೇಕು ಏನಾದರೂ ಐಡಿಯಾ ಕೊಡಿ ಅಂತಾ ಕೇಳಿದ್ದರಂತೆ. ಇದಕ್ಕೆ ಸಂಬರಗಿ, “ಮೊದಲಿಗೆ ಹುಡುಗಿಯರು ಸಾಫ್ಟ್ ಕಾರ್ನರ್ ಇರುವ ವಿಚಾರವನ್ನು ಪ್ರಸ್ತಾಪಿಸಿ ಅವರ ಮನಸ್ಸನ್ನು ಗೆಲ್ಲಬೇಕು. ಆಗ ಅವರನ್ನು ಹ್ಯಾಂಡಲ್ ಮಾಡಲು ಸುಲಭವಾಗುತ್ತದೆ ಎಂದು ಹೇಳಿದ್ದರಂತೆ. ಅಲ್ಲದೆ ದಿವ್ಯಾ ಸುರೇಶ್ ಕ್ವಾಲಿಟಿ ನೋಡಿಕೊಂಡು ಹೇಗೆ ಮಾತನಾಡಬೇಕು, ಹಾಗೇ ಮಾತನಾಡು, ಇರಿಟೆಟ್ ಮಾಡಬೇಡ ಎಂದು ಹೇಳಿದ್ದಾಗಿ ಸಂಬರಗಿ ಹೇಳಿದರು. ಬಳಿಕ ಶಮಂತ್ ಮಾತನಾಡಿ, ಮೊದಲಿಗೆ ಟಾರ್ಗೆಟ್ ಇಂಪಾರ್ಟೆಟ್. ಫಸ್ಟ್ ಒಳ್ಳೆಯವರು ಅನಿಸಿಕೊಳ್ಳಬೇಕು ನಂತರ ಫ್ರೆಂಡ್ ಶಿಪ್ ಬೆಳೆಸಿಕೊಳ್ಳಬೇಕು. ನೆಕ್ಸ್ಟ್ ಏನು ಮಾಡಬೇಕೆಂದು ಹೇಳುತ್ತೇನೆ ಎಂದು ಹೇಳಿದ್ದರು ಎಂದು ಸುದೀಪ್ ಗೆ ಹೇಳುತ್ತಾರೆ.
ಆಗ ಕಿಚ್ಚ, ಪ್ರಶಾಂಶ್ ರವರೆ ವಾಟ್ ನೆಕ್ಸ್ಟ್ ಅಂತಾ ಕೇಳುತ್ತಾರೆ. ಇದಕ್ಕೆ ಸಂಬರಗಿ, ಕಾಮನ್ ಟಾಪಿಕ್ ಹುಡುಕಿಕೊಂಡು ಮಾತನಾಡಬೇಕು. ಮೊದಲಿಗೆ ಎಜುಕೇಷನ್ ಬ್ಯಾಗ್ ರೌಂಡ್ ಅಥವಾ ಫ್ಯಾಮಿಲಿ ಬ್ಯಾಗ್ ರೌಂಡ್ ವಿಚಾರವಾಗಿ ಮಾತನಾಡಬೇಕು. ಫಾರ್ ಎಕ್ಸಾಂಪಲ್ ದಿವ್ಯಾಗೆ ಮ್ಯೂಸಿಕ್ ಹಾಗೂ ಸ್ಪೋರ್ಸ್ ಇಷ್ಟ. ಸೋ ಆ ಟಾಪಿಕ್ ಬಗ್ಗೆ ಮಾತನಾಡು ಇದರಿಂದ ಅವಳಿಗೆ ಹತ್ತಿರವಾಗುತ್ತಿಯಾ ಎಂದು ಶಮಂತ್ ಗೆ ಹೇಳಿದ್ದೆ ಎಂದು ಹೇಳುತ್ತಾರೆ. ಇದರೊಂದಿಗೆ ದೊಡ್ಡ ಮನೆಯ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಹುಡುಗಿಯನ್ನ ಪಟಾಯಿಸೋದು ಹೇಗೆ ಅನ್ನೋ ಚರ್ಚೆಯೇ ದೊಡ್ಡದಾಗಿ ನಡೆಯಿತು.
