BIGGBOSS 8 : ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ‘ಕಳಪೆ’ಯಾದ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿಯಾಗ್ತಾರಂತೆ..!
ಬಿಗ್ ಬಾಸ್ ಮನೆಗೆ ಪಟಾಕಿಯಂತೆ ಎಂಟ್ರಿಕೊಟ್ಟು ಮನೆ ಮಂದಿಯ ದೃಷ್ಟಿಯಲ್ಲಿ ಮೊದಲನೇ ದಿನವೇ ನೆಗೆಟಿವ್ ಇಮ್ಯಾಂಕ್ಟ್ ಬಿಟ್ಟಿದ್ದ ಚಕ್ರವರ್ತಿ , ಬಂದಾಗಿನಿಂದಲೇ ದೊಡ್ಮನೆಯಲ್ಲಿ ಲೈಮ್ ಲೈಟ್ ನಲ್ಲಿದ್ದಾರೆ. ಎಲ್ಲಾ ಪೋಕಸ್ ಅವರ ಮೇಲೆಯೇ ಇದೆ. ಆದ್ರೆ ಚಕ್ರವರ್ತಿ ಕಂಡ್ರೆ ಸದಸ್ಯರಿಗೆ ಮೊದಲಿನಿಂದಲೂ ಸಹ ಅಷ್ಟಕಷ್ಟೇ. ಇದಕ್ಕೆ ಅವರ ನೇರ ನುಡಿಯೇ ಕಾರಣವೂ ಇರಬಹುದು.
ಬಹುಷಃ ಈ ಕಾರಣಗಳಿಂದಾಗಿ ಮನೆ ಸದಸ್ಯರು 6ನೇ ವಾರ ಚಕ್ರವರ್ತಿ ಅವರನ್ನ ಕಳಪೆ ಪ್ರದರ್ಶನಕ್ಕಾಗಿ ಆಯ್ಕೆ ಮಾಡಿದ್ದಾರೆ. ಆದ್ರೆ ತಮ್ಮನ್ನ ಕಳಪೆ ಎಂದು ಜೈಲಿಗೆ ಕಳಿಸಿದ್ದಕ್ಕೆ ಸಿಟ್ಟುಗೊಂಡಿರುವ ಚಕ್ರವರ್ತಿ ಇನ್ಮುಂದೆ ವರಸೆ ಬದಲಾಯಿಸುತ್ತಾರಂತೆ. ಸರ್ವಾಧಿಕಾರಿ ಆಗಿ ಮುಂದೆಯೂ ಇರ್ತೀನಿ, ವಾರ ವಾರ ಜೈಲಿಗೆ ಬರ್ತೀನಿ, ಎಲ್ಲರಿಗೂ ಉತ್ತರ ಕೊಡ್ತೀನಿ ಅಂತ ತಿ ಹೇಳಿದ್ದಾರೆ.