Bihar : ಮೊಬೈಲ್ ಟವರ್ ಬಳಿಕ, 2 ಕಿ.ಮೀ ರೈಲ್ವೆ ಹಳಿಯನ್ನೇ ಕದ್ದ ಕಳ್ಳರು….
ಸುಮಾರು 2 ಕಿ.ಮೀ ರೈಲ್ವೆ ಹಳಿಯನ್ನ ದುಷ್ಕರ್ಮಿಗಳು ಕಳ್ಳತನ ಮಾಡಿರುವ ಪ್ರಕರಣ ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಹತ್ ಶುಗರ್ ಮಿಲ್ ಕಾರ್ಖಾನೆಯನ್ನ ಪಾಂಡೌಲ್ ರೈಲು ನಿಲ್ದಾಣದೊಂದಿಗೆ ಸಂಪರ್ಕಿಸಲು ಬಳಸಲಾಗಿದ್ದ ಟ್ರ್ಯಾಕ್ ನ್ನ ಕಳ್ಳರು ಹೊತ್ತೋಯ್ದಿದ್ದಾರೆ.
ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸದ ಕಾರಣ ರೈಲು ಸಂಚಾರವಿಲ್ಲದೆ, ಕಳೆದ ಕೆಲವು ವರ್ಷಗಳಿಂದ ರೈಲ್ವೆ ಹಳಿಯನ್ನು ಮುಚ್ಚಲಾಗಿತ್ತು ಎನ್ನಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ನೌಕರರನ್ನು ಅಮಾನತುಗೊಳಿಸಲಾಗಿದೆ. ಈ ಅಪರಾಧದಲ್ಲಿ ಆರ್ಪಿಎಫ್ ಸಿಬ್ಬಂದಿಯೂ ಭಾಗಿಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ರಸ್ತೆಯಲ್ಲಿ ಯಾವುದೇ ಚಲನವಲನ ಇಲ್ಲದ ಕಾರಣ, ಕಳ್ಳರು ಟ್ರ್ಯಾಕ್ ಅನ್ನು ಕದ್ದು ಸ್ಕ್ರ್ಯಾಪ್ ಡೀಲರ್ಗಳಿಗೆ ಮಾರಾಟ ಮಾಡಿದ್ದಾರೆ. ಬಿಹಾರದಲ್ಲಿ ರೈಲ್ವೇ ಸ್ಕಾರ್ಪ್ಗಳ ಕಳ್ಳತನ ನಿತ್ಯದ ಸಂಗತಿ. ಆದರೆ 2 ಕಿಮೀ ಹಳಿಯನ್ನ ಕಳವು ಮಾಡಿರುವುದು ಇದೇ ಮೊದಲು. ರೈಲ್ವೆ ಆರ್ಪಿಎಫ್ನಿಂದ ಎಫ್ಐಆರ್ ದಾಖಲಾಗಿದೆ.
Bihar: After the mobile tower, thieves stole 2 km of railway tracks.