Bihar : ಮದುವೆ ಸಮಾರಂಭದಲ್ಲಿ DJ ಸೌಂಡ್ – ಕುಸಿದುಬಿದ್ದ ವರ ಸಾವು…
ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಡಿಜೆ ಸೌಂಡ್ ನ ಡೆಸಿಬಲ್ ಹೆಚ್ಚಾಗಿ ವರ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾನೆ. ತಕ್ಷಣವೆ ವರ ಸುರೇಂದ್ರ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗಾಗಿ ಸೀತಾಮರ್ಹಿಗೆ ಸ್ಥಳಾಂತರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಬುಧವಾರದಂದು ವಧು ವರರಿಬ್ಬರೂ ಮದುವೆ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಮೆರವಣಿಗಾಗಿ ಸಿದ್ಧಪಡಿಸಿದ ಗಾಡಿಯಲ್ಲಿ ಕುಳಿತಿದ್ದಾರೆ. ಮೆರವಣಿಗೆಯಲ್ಲಿ ಪ್ಲೇ ಆಗುತ್ತಿದ್ದ ಡಿ ಜೆ ಸೌಂಡಿನ ಬಗ್ಗೆ ಸುರೇಂದ್ರ ಕುಮಾರ್ ಪದೆ ಪದೇ ದೂರು ನೀಡಿದರೂ ಯಾರೂ ಕೇಳಿಸಿಕೊಂಡಿಲ್ಲ.
ಮೆರವಣಿಗೆಯ ನಂತರದ ಕೆಲವೇ ಕ್ಷಣಗಳಲ್ಲಿ ವರ ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತದೂ ವೈದ್ಯರು ಮತ್ತೊಂದು ಆಸ್ಪತ್ರೆಗೆ ಶಿಫಾರುಸ್ಸು ಮಾಡಿದ್ದಾರೆ. ಅಲ್ಲಿಗೆ ಕರೆದೊಯ್ಯುವ ಮಾರ್ಗ ಮಧ್ಯಯೇ ವರ ಸಾವನ್ನಪ್ಪಿದ್ದಾನೆ.
ಕಟ್ಟುನಿಟ್ಟಾದ ನಿಷೇಧದ ಹೊರತಾಗಿಯೂ ಡಿಜೆಗಳ ಬಳಕೆ ಬಗ್ಗೆ ಆಡಳಿತ ಮಂಡಿಳಿ ಪ್ರಶ್ನೆ ಎತ್ತಿದೆ. ಸಾಮಾಜಿಕ ಕಾರ್ಯಕರ್ತ ಡಾ.ರಾಜೀವ್ ಕುಮಾರ್ ಮಿಶ್ರಾ ಕೂಡ ಡಿಜೆಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಡಳಿತವನ್ನು ಒತ್ತಾಯಿಸಿದ್ದಾರೆ.
Bihar : DJ sound at wedding ceremony – groom dies after collapsing…