ಬಿಹಾರ ವಿಧಾನಸಭಾ ಚುನಾವಣೆ (Bihar Assembly Election) ಸಾಕಷ್ಟು ಕಾರಣಗಳಿಗೆ ಮಹತ್ವ ಪಡೆದುಕೊಂಡಿತ್ತು.. ಅಂತೂ ಫಲಿತಾಂಶ ಬಂದಾಯ್ತು.. ಎನ್‌ಡಿಎ ಗೆದ್ದಾಯ್ತು.. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗೋದು ಪಕ್ಕಾ.. ಹಾಗೆ ನೋಡಿದ್ರೆ ಈ ಫಲಿತಾಂಶ ಬಿಹಾರಕ್ಕೆ ಮಾತ್ರ ಸೀಮಿತ.. ಆದರೆ ಫಲಿತಾಂಶದ ಪರಿಣಾಮ ಕರ್ನಾಟಕದ ಮೇಲಿದೆ.. ಅದೂ ಕೂಡ ದೊಡ್ಡ ಮಟ್ಟಿಗೆ..
ನೋಡಿ..ಈ ಫಲಿತಾಂಶ ರಾಜ್ಯದಲ್ಲಿ ಯಾರಿಗೆ ಖುಷಿ ಕೊಟ್ಟಿದ್ಯೋ ಇಲ್ವೋ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನಿತೀಶ್ ಕುಮಾರಷ್ಟೆ ಖುಷಿ ಕೊಟ್ಟಿರುತ್ತೆ.. ಯಾಕಂದ್ರೆ ಬಿಹಾರ ರಾಜಕೀಯ ಪರಿಸ್ಥಿತಿಗೂ, ಕರ್ನಾಟಕ ರಾಜಕೀಯ ಸ್ಥಿತಿಗೂ ಒಂದಿಷ್ಟು ಸಾಮ್ಯತೆ ಇದೆ..
ಬಿಹಾರದಲ್ಲಿ ಬಿಜೆಪಿ ಜೆಡಿಯು ಮೈತ್ರಿ.. ಕರ್ನಾಟಕದಲ್ಲಿ. ಬಿಜೆಪಿ ಜೆಡಿಎಸ್ ದೋಸ್ತಿ.. ಈ ರಾಜಕೀಯ ಒಪ್ಪಂದ ಬಿಹಾರದಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಅನಿವಾರ್ಯ.. ಸದ್ಯದ ಪರಿಸ್ಥಿತಿಯಲ್ಲಿ ಬಿಹಾರದಂತೆ ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿ ಇಲ್ಲದೇ ಅಧಿಕಾರಕ್ಕೆ ಬರೋಕೆ ಸಾಧ್ಯ ಇಲ್ಲ.
ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಎಷ್ಟು ಲಾಭ ಅನ್ನೋದು 2024ರ ಲೋಕಸಭಾ ಎಲೆಕ್ಷನ್ ನಲ್ಲೇ ಗೊತ್ತಾಗಿದೆ.. ಆದರೂ ರಾಜ್ಯ ಬಿಜೆಪಿ ನಾಯಕರು ಈ ಮೈತ್ರಿ ಬಗ್ಗೆ ಸಂಪೂರ್ಣವಾಗಿ ಸಂತೃಪ್ತರಾಗಿಲ್ಲ.. ಒಳಗೊಳಗೆ ಕಸಿವಿಸಿ ಅನುಭವಿಸುತ್ತಿದ್ದಾರೆ.. ಅವಕಾಶ ಸಿಕ್ಕರೆ ಅಮಿತ್ ಶಾ ತಲೆಕೆಡಿಸಿ ಜೆಡಿಎಸ್ ಜೊತೆಗಿನ ಮೈತ್ರಿ ತಿಲಾಂಜಲಿ ಇಡೋಕೆ ಪ್ರಯತ್ನ ನಡೆಸುತ್ತಲೇ ಇದ್ದಾರೆ.. ಇದು ಹೆಚ್ ಡಿ ಕುಮಾರಸ್ವಾಮಿಯವರಿಗೂ ಗೊತ್ತು.. ಇದೇ ಕಾರಣಕ್ಕೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮೊನ್ನೆ ಒಂದು ಕರೆ ಕೊಟ್ಟಿದ್ದು, ನೋಡಿ ನೀವು ಇಲ್ಲಿನ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಮೇಲಿಂದ ಸೀಟು ತರೋದು ನನಗೆ ಗೊತ್ತು ಅಂತ.. ಅಂದ್ರೆ ಕುಮಾರಸ್ವಾಮಿ ಕೂಡ ರಾಜ್ಯ ಬಿಜೆಪಿ ನಾಯಕರಿಗಿಂತ ಮೇಲಿನ ನಾಯಕರ ಮೇಲೆಯೇ ವಿಶ್ವಾಸ ಇಟ್ಟಿದ್ದಾರೆ.. ಆದರೂ ಎಲ್ಲೋ ಒಂದು ಕಡೆ ಈ ಮೈತ್ರಿ ಅಳಿವು ಉಳಿವಿನ ಬಗ್ಗೆ ಕುಮಾರಸ್ವಾಮಿಗೆ ಒಂದು ಅನುಮಾನ ಇದ್ದೇ ಇದೆ.. ಈಗ ಯಾವುದೇ ಅನುಮಾನ ಇಲ್ಲ..
ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶ..! ಎನ್‍ಡಿಎಗೆ ಅಭೂತಪೂರ್ವ ಬಹುಮತ
ಬಿಹಾರ ಫಲಿತಾಂಶದ ನಂತರ ಕುಮಾರಸ್ವಾಮಿ ನೂರಕ್ಕೂ ನೂರು ಪರ್ಸೆಂಟ್ ನಿರಾಳರಾಗಿದ್ದಾರೆ.. ಯಾಕಂದ್ರೆ ಬಿಹಾರದಲ್ಲಿ NDA ಗೆಲುವಿಗೆ ಪ್ರಮುಖ ಕಾರಣ ಬಿಜೆಪಿ ಜೆಡಿಯು ಮೈತ್ರಿ.. ಅದರಲ್ಲೂ ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ್ಲ ಇಲ್ಲದೆ ಎದುರಾಳಿ ಆರ್ ಜೆಡಿ ಕಾಂಗ್ರೆಸ್ ಪಕ್ಷಗಳನ್ನ ಸೋಲಿಸೋದು ಒಂದೇ ಗುರಿ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದು NDA ಗೆ ಪ್ಲಸ್ ಆಯ್ತು.. ಅಲ್ಲದೆ ಮಿತ್ರ ಪಕ್ಷಗಳು ಕೇಳಿದಷ್ಟು ಅಲ್ಲದೆ ಇದ್ದರೂ ಒಂದಿಷ್ಟು ಕ್ಷೇತ್ರಗಳನ್ನ ಬಿಟ್ಟು ಕೊಟ್ಟು, ಮತ ವಿಭಜನೆ ಆಗದಂತೆ ಅಂದುಕೊಂಡ ಗೆಲುವು ಸಾಧಿಸಿದೆ ಬಿಜೆಪಿ.. ಇದಕ್ಕೆ ಜೆಡಿಯು ಬಿಜೆಪಿ ಎಲ್ ಜೆಪಿ ನಡುವಿನ ಹೊಂದಾಣಿಕೆ ಪ್ರಮುಖ ಕಾರಣ.. ಹಾಗ್ ನೋಡಿದ್ರೆ ಬಿಜೆಪಿ ವರಿಷ್ಠರು ದೋಸ್ತಿಗಳಿಗೆ ಸೀಟು ಹಂಚುವುದರಲ್ಲಿ ಈ ಹಿಂದಿನಗಿಂತಲೂ ಕೊಂಚ ಧಾರಾಳವಾಗಿದ್ದಾರೆ.. ಈ ಧಾರಾಳತೆ ಬಿಜೆಪಿಗೆ ಕೂಡಿ ಬರ್ತಿದೆ.. ಮಿತ್ರ ಪಕ್ಷಗಳು ಕೂಡ ಸಂತೃಪ್ತವಾಗುತ್ತಿವೆ.. ಅಂದ್ರೆ ಬಿಹಾರದಲ್ಲಿ ಮೈತ್ರಿ ವರ್ಕೌಟ್ ಆಗಿದೆ.. ಆದ್ದರಿಂದ ಕರ್ನಾಟಕದಲ್ಲೂ ಜೆಡಿಎಸ್ ಬಿಜೆಪಿ ಮೈತ್ರಿ ಮತ್ತಷ್ಟು ಸ್ಟ್ರಾಂಗ್ ಆಗಿದೆ.. ಇದರ ಜೊತೆಗೆ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಮೊತ್ತದ ಕ್ಷೇತ್ರಗಳನ್ನೇ ಕೇಳುವ ಎಲ್ಲಾ ಸಾಧ್ಯತೆಗಳಿವೆ..
ಅಂದ್ರೆ ಹೇಗೆ ಬಿಹಾರದಲ್ಲಿ ಜೆಡಿಯು ಬಿಜೆಪಿ ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವೋ ಅದೇ ರೀತಿ ಜೆಡಿಎಸ್ ಬಿಜೆಪಿ ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದು.. ಬಿಹಾರ ಫಲಿತಾಂಶದಿಂದ ಹೆಚ್ಚು ಕ್ಷೇತ್ರಗಳನ್ನ ಕೇಳುವ ಧೈರ್ಯ ಕುಮಾರಸ್ವಾಮಿಗೂ ಬಂದಿದೆ.. ಹಳೇ ಮೈಸೂರು ಭಾಗದಲ್ಲಿ 70ರಷ್ಟು ಕ್ಷೇತ್ರಗಳಲ್ಲಿ ಮಧ್ಯ ಕರ್ನಾಟಕ, ಕರಾವಳಿ ಭಾಗದಲ್ಲಿ 30 ರಷ್ಟು ಕ್ಷೇತ್ರಗಳನ್ನ ಕುಮಾರಸ್ವಾಮಿ ಗಟ್ಟಿಯಾಗಿ ಕೇಳಬಹುದು.. ಕಾಂಗ್ರೆಸ್ ಪಕ್ಷವನ್ನ ಸೋಲಿಸಲೇಬೇಕು ಅಂದ್ರೆ ಬಿಜೆಪಿ ಕೂಡ ಅನಿವಾರ್ಯವಾಗಿ ಕುಮಾರಸ್ವಾಮಿ ಮಾತಿನಂತೆ ನಡೆದುಕೊಳ್ಳಬೇಕಾಗುತ್ತೆ.. ಒಟ್ಟಾರೆಯಾಗಿ ಬಿಹಾರ ಫಲಿತಾಂಶ.. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಇದ್ದ ಗೊಂದಲಗಳಿಗೆ ಬ್ರೇಕ್ ಹಾಕೋದು ಅಲ್ಲದೆ, ಮುಂದಿನ ವಿಧಾನ ಸಭಾ ಚುನಾವಣೆಗೆ ರೆಡಿಮೇಡ್ ಸೂತ್ರ ಕೊಟ್ಟಿದೆ..
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








