ADVERTISEMENT
Monday, July 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

ಬಿಹಾರ ಚುನಾವಣಾ ಫಲಿತಾಂಶ: ಜೆಡಿಎಸ್ -ಬಿಜೆಪಿ ಮೈತ್ರಿ ಮತ್ತಷ್ಟು ಬಲಿಷ್ಠ ಕುಮಾರಣ್ಣ ದಿಲ್ ಖುಷ್

Saaksha Editor by Saaksha Editor
November 15, 2025
in Politics, National, Newsbeat, ರಾಜಕೀಯ
Bihar Election Result: JDS-BJP Alliance Strengthens HD Kumaraswamy Reacts

ಹೆಚ್‌ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ

Share on FacebookShare on TwitterShare on WhatsappShare on Telegram

ಬಿಹಾರ ವಿಧಾನಸಭಾ ಚುನಾವಣೆ (Bihar Assembly Election) ಸಾಕಷ್ಟು ಕಾರಣಗಳಿಗೆ ಮಹತ್ವ ಪಡೆದುಕೊಂಡಿತ್ತು.. ಅಂತೂ ಫಲಿತಾಂಶ ಬಂದಾಯ್ತು.. ಎನ್‌ಡಿಎ ಗೆದ್ದಾಯ್ತು.. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗೋದು ಪಕ್ಕಾ.. ಹಾಗೆ ನೋಡಿದ್ರೆ ಈ ಫಲಿತಾಂಶ ಬಿಹಾರಕ್ಕೆ ಮಾತ್ರ ಸೀಮಿತ.. ಆದರೆ ಫಲಿತಾಂಶದ ಪರಿಣಾಮ ಕರ್ನಾಟಕದ ಮೇಲಿದೆ.. ಅದೂ ಕೂಡ ದೊಡ್ಡ ಮಟ್ಟಿಗೆ..

ನೋಡಿ..ಈ ಫಲಿತಾಂಶ ರಾಜ್ಯದಲ್ಲಿ ಯಾರಿಗೆ ಖುಷಿ ಕೊಟ್ಟಿದ್ಯೋ ಇಲ್ವೋ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನಿತೀಶ್ ಕುಮಾರಷ್ಟೆ ಖುಷಿ ಕೊಟ್ಟಿರುತ್ತೆ..  ಯಾಕಂದ್ರೆ ಬಿಹಾರ ರಾಜಕೀಯ ಪರಿಸ್ಥಿತಿಗೂ, ಕರ್ನಾಟಕ ರಾಜಕೀಯ ಸ್ಥಿತಿಗೂ ಒಂದಿಷ್ಟು ಸಾಮ್ಯತೆ ಇದೆ..

Related posts

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

July 27, 2026
ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

July 27, 2026

ಬಿಹಾರದಲ್ಲಿ ಬಿಜೆಪಿ ಜೆಡಿಯು ಮೈತ್ರಿ.. ಕರ್ನಾಟಕದಲ್ಲಿ. ಬಿಜೆಪಿ ಜೆಡಿಎಸ್ ದೋಸ್ತಿ.. ಈ ರಾಜಕೀಯ ಒಪ್ಪಂದ ಬಿಹಾರದಲ್ಲಿ  ಕರ್ನಾಟಕದಲ್ಲಿ ಬಿಜೆಪಿಗೆ ಅನಿವಾರ್ಯ.. ಸದ್ಯದ ಪರಿಸ್ಥಿತಿಯಲ್ಲಿ  ಬಿಹಾರದಂತೆ ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿ ಇಲ್ಲದೇ ಅಧಿಕಾರಕ್ಕೆ ಬರೋಕೆ ಸಾಧ್ಯ ಇಲ್ಲ.

ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಎಷ್ಟು ಲಾಭ ಅನ್ನೋದು 2024ರ ಲೋಕಸಭಾ ಎಲೆಕ್ಷನ್ ನಲ್ಲೇ ಗೊತ್ತಾಗಿದೆ..  ಆದರೂ ರಾಜ್ಯ ಬಿಜೆಪಿ ನಾಯಕರು ಈ ಮೈತ್ರಿ ಬಗ್ಗೆ ಸಂಪೂರ್ಣವಾಗಿ ಸಂತೃಪ್ತರಾಗಿಲ್ಲ.. ಒಳಗೊಳಗೆ ಕಸಿವಿಸಿ ಅನುಭವಿಸುತ್ತಿದ್ದಾರೆ.. ಅವಕಾಶ ಸಿಕ್ಕರೆ ಅಮಿತ್ ಶಾ ತಲೆಕೆಡಿಸಿ ಜೆಡಿಎಸ್ ಜೊತೆಗಿನ ಮೈತ್ರಿ ತಿಲಾಂಜಲಿ ಇಡೋಕೆ ಪ್ರಯತ್ನ ನಡೆಸುತ್ತಲೇ ಇದ್ದಾರೆ..  ಇದು ಹೆಚ್ ಡಿ ಕುಮಾರಸ್ವಾಮಿಯವರಿಗೂ ಗೊತ್ತು.. ಇದೇ ಕಾರಣಕ್ಕೆ  ತಮ್ಮ ಪಕ್ಷದ ಕಾರ್ಯಕರ್ತರಿಗೆ ಮೊನ್ನೆ ಒಂದು ಕರೆ ಕೊಟ್ಟಿದ್ದು, ನೋಡಿ ನೀವು ಇಲ್ಲಿನ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಮೇಲಿಂದ ಸೀಟು ತರೋದು ನನಗೆ ಗೊತ್ತು ಅಂತ.. ಅಂದ್ರೆ ಕುಮಾರಸ್ವಾಮಿ ಕೂಡ ರಾಜ್ಯ ಬಿಜೆಪಿ ನಾಯಕರಿಗಿಂತ ಮೇಲಿನ ನಾಯಕರ ಮೇಲೆಯೇ ವಿಶ್ವಾಸ ಇಟ್ಟಿದ್ದಾರೆ.. ಆದರೂ ಎಲ್ಲೋ ಒಂದು ಕಡೆ ಈ ಮೈತ್ರಿ ಅಳಿವು ಉಳಿವಿನ ಬಗ್ಗೆ ಕುಮಾರಸ್ವಾಮಿಗೆ ಒಂದು ಅನುಮಾನ ಇದ್ದೇ ಇದೆ.. ಈಗ ಯಾವುದೇ ಅನುಮಾನ ಇಲ್ಲ..

ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶ..! ಎನ್‍ಡಿಎಗೆ ಅಭೂತಪೂರ್ವ ಬಹುಮತ

ಬಿಹಾರ ಫಲಿತಾಂಶದ ನಂತರ ಕುಮಾರಸ್ವಾಮಿ ನೂರಕ್ಕೂ ನೂರು ಪರ್ಸೆಂಟ್ ನಿರಾಳರಾಗಿದ್ದಾರೆ.. ಯಾಕಂದ್ರೆ ಬಿಹಾರದಲ್ಲಿ NDA ಗೆಲುವಿಗೆ ಪ್ರಮುಖ ಕಾರಣ ಬಿಜೆಪಿ ಜೆಡಿಯು ಮೈತ್ರಿ.. ಅದರಲ್ಲೂ ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ್ಲ ಇಲ್ಲದೆ ಎದುರಾಳಿ ಆರ್ ಜೆಡಿ ಕಾಂಗ್ರೆಸ್ ಪಕ್ಷಗಳನ್ನ ಸೋಲಿಸೋದು ಒಂದೇ ಗುರಿ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದು NDA ಗೆ ಪ್ಲಸ್ ಆಯ್ತು.. ಅಲ್ಲದೆ ಮಿತ್ರ ಪಕ್ಷಗಳು ಕೇಳಿದಷ್ಟು ಅಲ್ಲದೆ ಇದ್ದರೂ ಒಂದಿಷ್ಟು ಕ್ಷೇತ್ರಗಳನ್ನ  ಬಿಟ್ಟು ಕೊಟ್ಟು, ಮತ ವಿಭಜನೆ ಆಗದಂತೆ ಅಂದುಕೊಂಡ ಗೆಲುವು ಸಾಧಿಸಿದೆ ಬಿಜೆಪಿ.. ಇದಕ್ಕೆ ಜೆಡಿಯು ಬಿಜೆಪಿ ಎಲ್ ಜೆಪಿ ನಡುವಿನ ಹೊಂದಾಣಿಕೆ ಪ್ರಮುಖ ಕಾರಣ.. ಹಾಗ್ ನೋಡಿದ್ರೆ ಬಿಜೆಪಿ ವರಿಷ್ಠರು ದೋಸ್ತಿಗಳಿಗೆ ಸೀಟು ಹಂಚುವುದರಲ್ಲಿ ಈ ಹಿಂದಿನಗಿಂತಲೂ ಕೊಂಚ ಧಾರಾಳವಾಗಿದ್ದಾರೆ.. ಈ ಧಾರಾಳತೆ ಬಿಜೆಪಿಗೆ ಕೂಡಿ ಬರ್ತಿದೆ.. ಮಿತ್ರ ಪಕ್ಷಗಳು ಕೂಡ ಸಂತೃಪ್ತವಾಗುತ್ತಿವೆ.. ಅಂದ್ರೆ ಬಿಹಾರದಲ್ಲಿ ಮೈತ್ರಿ ವರ್ಕೌಟ್ ಆಗಿದೆ.. ಆದ್ದರಿಂದ ಕರ್ನಾಟಕದಲ್ಲೂ ಜೆಡಿಎಸ್ ಬಿಜೆಪಿ ಮೈತ್ರಿ ಮತ್ತಷ್ಟು ಸ್ಟ್ರಾಂಗ್ ಆಗಿದೆ.. ಇದರ ಜೊತೆಗೆ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಮೊತ್ತದ ಕ್ಷೇತ್ರಗಳನ್ನೇ ಕೇಳುವ ಎಲ್ಲಾ ಸಾಧ್ಯತೆಗಳಿವೆ..

ಅಂದ್ರೆ ಹೇಗೆ ಬಿಹಾರದಲ್ಲಿ ಜೆಡಿಯು ಬಿಜೆಪಿ ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವೋ ಅದೇ ರೀತಿ ಜೆಡಿಎಸ್ ಬಿಜೆಪಿ ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದು.. ಬಿಹಾರ ಫಲಿತಾಂಶದಿಂದ ಹೆಚ್ಚು ಕ್ಷೇತ್ರಗಳನ್ನ ಕೇಳುವ ಧೈರ್ಯ ಕುಮಾರಸ್ವಾಮಿಗೂ ಬಂದಿದೆ.. ಹಳೇ ಮೈಸೂರು ಭಾಗದಲ್ಲಿ 70ರಷ್ಟು ಕ್ಷೇತ್ರಗಳಲ್ಲಿ ಮಧ್ಯ ಕರ್ನಾಟಕ, ಕರಾವಳಿ ಭಾಗದಲ್ಲಿ 30 ರಷ್ಟು ಕ್ಷೇತ್ರಗಳನ್ನ ಕುಮಾರಸ್ವಾಮಿ ಗಟ್ಟಿಯಾಗಿ ಕೇಳಬಹುದು.. ಕಾಂಗ್ರೆಸ್ ಪಕ್ಷವನ್ನ ಸೋಲಿಸಲೇಬೇಕು ಅಂದ್ರೆ ಬಿಜೆಪಿ ಕೂಡ ಅನಿವಾರ್ಯವಾಗಿ ಕುಮಾರಸ್ವಾಮಿ ಮಾತಿನಂತೆ ನಡೆದುಕೊಳ್ಳಬೇಕಾಗುತ್ತೆ.. ಒಟ್ಟಾರೆಯಾಗಿ ಬಿಹಾರ ಫಲಿತಾಂಶ.. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಇದ್ದ ಗೊಂದಲಗಳಿಗೆ ಬ್ರೇಕ್ ಹಾಕೋದು ಅಲ್ಲದೆ, ಮುಂದಿನ ವಿಧಾನ ಸಭಾ ಚುನಾವಣೆಗೆ ರೆಡಿಮೇಡ್ ಸೂತ್ರ ಕೊಟ್ಟಿದೆ..

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: Bihar assembly election resultsBihar election news todayBihar Election ResultBihar poll analysisHD Kumaraswamy ReactionJDS BJP allianceJDS BJP political strategyKumaraswamy Dil KhushLatest political updates IndiaNDA in Biharಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆಕುಮಾರಸ್ವಾಮಿ ದಿಲ್ ಖುಷ್ಚುನಾವಣಾ ಸುದ್ದಿ ಇಂದುಜೆಡಿಎಸ್ ಬಿಜೆಪಿ ಬಲವರ್ಧನೆಜೆಡಿಎಸ್ ಬಿಜೆಪಿ ಮೈತ್ರಿಬಿಹಾರ ಎನ್‌ಡಿಎಬಿಹಾರ ಚುನಾವಣೆ ಫಲಿತಾಂಶಬಿಹಾರ ರಾಜಕೀಯ ವಿಶ್ಲೇಷಣೆರಾಜಕೀಯ ಸುದ್ದಿ ಭಾರತ
ShareTweetSendShare
Join us on:

Related Posts

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

by admin
July 27, 2026
0

ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ...

ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

ಪಂಜಾಬ್ ಮತ್ತು ಕರ್ನಾಟಕದ ಹಗರಣಗಳಿಗೆ ಸಚಿವರು ಯಾಕೆ ರಾಜೀನಾಮೆ ನೀಡಿಲ್ಲ? ಆಪ್ ಮತ್ತು ಕಾಂಗ್ರೆಸ್ ಗೆ ಪ್ರಹ್ಲಾದ ಜೋಶಿ ಪ್ರಶ್ನೆ

by Shwetha
July 27, 2026
0

ಧಾರವಾಡ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ (ಆಪ್) ನೈತಿಕತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ....

ಡಿಸಿಎಂ ಹುದ್ದೆಗಾಗಿ ನಾನು ಲಾಬಿ ಮಾಡಿಲ್ಲ- ನೀಟ್ ಹಗರಣ: ಮೋದಿಯ ಯುಗ ಅಂತ್ಯದ ಮುನ್ಸೂಚನೆ- ಎಂ.ಬಿ.ಪಾಟೀಲ್

ಡಿಸಿಎಂ ಹುದ್ದೆಗಾಗಿ ನಾನು ಲಾಬಿ ಮಾಡಿಲ್ಲ- ನೀಟ್ ಹಗರಣ: ಮೋದಿಯ ಯುಗ ಅಂತ್ಯದ ಮುನ್ಸೂಚನೆ- ಎಂ.ಬಿ.ಪಾಟೀಲ್

by Shwetha
July 27, 2026
0

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಮತ್ತು ಸಚಿವ ಸಂಪುಟ ವಿಸ್ತರಣೆಯ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ...

ಕಾಕ್ರೋಚ್ ಪಡೆಯ ನಾಟಕ ಬಯಲು- ಮೋದಿಯವರ ಮೌನವೇ ಮಹಾನ್ ಅಸ್ತ್ರ: ಅಸಲಿ ಗೆಲುವು ಬಿಜೆಪಿಯದ್ದೇ ಎಂದು ಸಾರುತ್ತಿದೆ ಸೋಷಿಯಲ್ ಮೀಡಿಯಾ!

ಕಾಕ್ರೋಚ್ ಪಡೆಯ ನಾಟಕ ಬಯಲು- ಮೋದಿಯವರ ಮೌನವೇ ಮಹಾನ್ ಅಸ್ತ್ರ: ಅಸಲಿ ಗೆಲುವು ಬಿಜೆಪಿಯದ್ದೇ ಎಂದು ಸಾರುತ್ತಿದೆ ಸೋಷಿಯಲ್ ಮೀಡಿಯಾ!

by Shwetha
July 27, 2026
0

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ...

UP ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್: ಅಖಿಲೇಶ್ ಯಾದವ್ ಗೆ ಓವೈಸಿ ಫ್ರೆಂಡ್ ರಿಕ್ವೆಸ್ಟ್! ಭಾಯಿಜಾನ್ ಗಳ ಮೈತ್ರಿ ಪ್ರಸ್ತಾಪಕ್ಕೆ ಬಿಜೆಪಿಯ ವ್ಯಂಗ್ಯದ ಏಟು

UP ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್: ಅಖಿಲೇಶ್ ಯಾದವ್ ಗೆ ಓವೈಸಿ ಫ್ರೆಂಡ್ ರಿಕ್ವೆಸ್ಟ್! ಭಾಯಿಜಾನ್ ಗಳ ಮೈತ್ರಿ ಪ್ರಸ್ತಾಪಕ್ಕೆ ಬಿಜೆಪಿಯ ವ್ಯಂಗ್ಯದ ಏಟು

by Shwetha
July 27, 2026
0

ಲಕ್ನೋ: ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. 2027ರ ವಿಧಾನಸಭಾ ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದ್ದರೂ, ವಿರೋಧ ಪಕ್ಷಗಳು ಈಗಲೇ ಮೈತ್ರಿ ಮಂತ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram