ಮೇ 15ರ ವರೆಗೂ ಬಿಹಾರದಲ್ಲಿ ಲಾಕ್ ಡೌನ್ ..!

1 min read

ಮೇ 15ರ ವರೆಗೂ ಬಿಹಾರದಲ್ಲಿ ಲಾಕ್ ಡೌನ್ ..!

ಬಿಹಾರ : ದೇಶಾದ್ಯಂತ ಕೊರೊನಾ 2ನೇ ಅಲೆ ಅತಿ ಭಯನಾಕರೂಪ ಪಡೆದಿದ್ದು, ಸಾವು ನೋವುಗಳ ಸಂಖ್ಯೆ , ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ.  ಈ ನಡುವೆ  ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಮತ್ತೊಂದೆಡೆ ಬಿಹಾರದಲ್ಲಿ ಸೋಂಕಿರತರ ಸಂಖ್ಯೆ ಹೆಚ್ಚಳವಾಗ್ತಿದ್ರು ಸಹ ಇಷ್ಟುದಿನಗಳ ವರೆಗೆ ಲಾಕ್ ಡೌನ್ ಹೇರದೇ ಕಟ್ಟು ನಿಟ್ಟಿನ ಕ್ರಮಕೈಗೊಳ್ಳದೇ ಇದ್ದದ್ದಕ್ಕೆ ಬಿಹಾರ ಸರ್ಕಾರವನ್ನ ಅಲ್ಲಿನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ರಾಜ್ಯದಲ್ಲಿ ಕೊರೊನಾ ಸಾವು-ನೋವು ಹೆಚ್ಚುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಿಹಾರ ಸರ್ಕಾರದ ವಿರುದ್ಧ ಹೈಕೋರ್ಟ್ ಆಕ್ರೋಶ ಹೊರಹಾಕಿತ್ತು. ಲಾಕ್​ಡೌನ್​ ಜಾರಿಗೊಳಿಸಿ, ಇಲ್ಲವೇ ನಾವು ನೀಡುವ ಕಠಿಣ ಆದೇಶಕ್ಕೆ ತಲೆಬಾಗಿ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್-19 ಪ್ರಕರಣಗಳ ನಿಯಂತ್ರಿಸಲು ಬಿಹಾರ ಸರ್ಕಾರ ಮೇ 15 ರವರೆಗೆ ರಾಜ್ಯವ್ಯಾಪಿ ಲಾಕ್ ಡೌನ್ ಹೇರಿದೆ. ದೇಶಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಇದೀಗ ಬಿಹಾರದಲ್ಲೂ ಮೇ. 15 ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​​, ‘ನಿನ್ನೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮೇ 15ರ ವರೆಗೆ ಲಾಕ್ ​ಡೌನ್ ಜಾರಿಗೆ ತರಲು ನಿರ್ಧರಿಸಲಾಗಿದೆ. ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಬಿಕ್ಕಟ್ಟು ನಿರ್ವಹಣಾ ತಂಡಕ್ಕೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ. ಬಿಹಾರ​ದಲ್ಲಿ ಸೋಮವಾರ ಒಂದೇ ದಿನ 11,407 ಹೊಸ ಸೋಂಕಿತರು ಪತ್ತೆಯಾಗಿದ್ದು, 82 ಮಂದಿ ಮೃತಪಟ್ಟಿದ್ದರು. ಈ ಮೂಲಕ ರಾಜ್ಯದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 5 ಲಕ್ಷಕ್ಕೆ ಹಾಗೂ ಸಾವಿನ ಸಂಖ್ಯೆ 2821ಕ್ಕೆ ಹೆಚ್ಚಳವಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd