ವೃದ್ಧನನ್ನ ಎಂಟು K M ಎಳೆದುಕೊಂಡು ಹೋಗಿ ಕೊಂದ ಕಾರು ಚಾಲಕ…
ಬೆಂಗಳೂರಿನಲ್ಲಿ ನಡೆದ ಹಿಟ್ ಅಂಡ್ ಡ್ರಾಗ್ ಪ್ರಕರಣದಂತೆ ಬಿಹಾರದಲ್ಲಿ ಇಂಥದೇ ಘಟನೆಯೊಂದು ವರದಿಯಾಗಿದೆ. ಸೈಕಲ್ ನಲ್ಲಿ ಬಂದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದ್ದು, ಸೈಕಲ್ ನಲ್ಲಿದ್ದ ವ್ಯಕ್ತಿ ಬಾನೆಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೂ ಕಾರು ನಿಲ್ಲಿಸಿದ ಚಾಲಕ 8 KM ವರೆಗೂ ಎಳೆದುಕೊಂಡು ಹೋಗಿದ್ದಾನೆ. ನಂತರ ಬ್ರೇಕ್ ಹಾಕಿದ್ದು ಕೆಳಗೆ ಬಿದ್ದ ವ್ಯಕ್ತಿಯ ಮೇಲೆ ಕಾರ್ ಹರಿದ ನಂತರ ವೃದ್ಧ ಸಾವನವನಪ್ಪಿದ್ದಾರೆ.
ಬಿಹಾರದ ಚಂಪಾರಣ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಈ ಘಟನೆ ನಡೆದಿದೆ ಸಾವನ್ನಪ್ಪಿದ ವ್ಯಕ್ತಿಯನ್ನ ಬಂಗ್ರಾ ಗ್ರಾಮದ ನಿವಾಸಿ 70 ವರ್ಷದ ಶಂಕರ್ ಚೌಧರಿ ಎಂದು ಗುರುತಿಸಲಾಗಿದೆ.
ಶಂಕರ್ ಚೌಧರಿ ಎಂಬುವವರು ಬೈಸಿಕಲ್ ನಲ್ಲಿ ಹೆದ್ದಾರಿ ದಾಟುವಾಗ ಕಾರು ಡಿಕ್ಕಿಯಾಗಿದೆ. ಈ ವೇಳೆ ಕಾರಿನ ಬಾನೆಟ್ ಮೇಲೆ ಶಂಕರ್ ಚೌಧರಿ ಎಗರಿ ಬಿದ್ದಿದ್ದಾನೆ. ವೃದ್ಧ ಕಾರು ನಿಲ್ಲಿಸುವಂತೆ ಕೇಳಿಕೊಂಡರು ಕಾರು ನಿಲ್ಲಿಸದೇ ಹಾಗೇ ಚಲಾಯಿಸಿದ್ದಾನೆ ಇದೇ ರೀತಿ 8 ಕಿ ಮಿ ಸಾಗಿದ ಬಳಿಕ ಮುಂದೆ ರಸ್ತೆಯಲ್ಲಿ ಹೆಚ್ಚು ಜನರಿದ್ದ ಕಾರಣ ಬ್ರೇಕ್ ಹಾಕಿದ ರಭಸಕ್ಕೆ ಶಂಕರ್ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆಯೇ ಕಾರು ಹರಿದಿದ್ದು ನಂತರ ಸಾವನ್ನಪ್ಪಿದ್ದಾರೆ.
ಪೊಲೀಸರು ಕಾರು ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಕಾರು ಚಾಲಕನಿಗಾಗಿ ಪತ್ತೆ ಹಚ್ಚಿದ್ದಾರೆ.
Bihar: The car driver killed an old man after dragging him to eight KM…