ಅಲೇ ಅಲೇ ಚಾಲಾಕಿ ಹೆಣ್ಣೆ, ಬಲಿಯಾಗುತ್ತಿತ್ತಲ್ಲಾ ನಿನ್ನಿಂದ ಒಂದು ಗಂಡು ಜೀವ
ಬಿಹಾರ: ಪತ್ನಿಯನ್ನು ಕೊಲೆ ಮಾಡಿದ್ದಾನೆಂದು ಪತಿಯನ್ನು ಜೈಲಿಗೆ ಅಟ್ಟಲಾಗಿತ್ತು, ಆದರೆ ಪತ್ನಿ ಪ್ರಿಯಕರನೊಂದಿಗೆ ಆರಾಮಾಗಿ ಓಡಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ಲಕ್ಷ್ಮಿಪುರದ ನಿವಾಸಿ ರಾಮ್ ಎಂಬುವುರು 2016 ಜೂನ್ 14 ರಂದು ಶಾಂತಾ ದೇವಿಯನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ 1 ವರ್ಷದ ನಂತರ ಏಪ್ರಿಲ್ 19 ರಂದು ಶಾಂತಾ ದೇವಿ ನಾಪತ್ತೆಯಾಗಿದ್ದಳು. ಮಹಿಳೆ ನಾಪತ್ತೆಯಾದ ನಂತರ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಮಗಳ ಪತಿ ವರದಕ್ಷಿಣೆ ಕಿರುಕುಳ ನೀಡಿ, ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಪೋಷಕರ ಆರೋಪದ ದೂರಿನ ಮೇರೆಗೆ ಪೊಲೀಸರು ದಿನೇಶ್ ನನ್ನು ಬಂಧಿಸಿ ಕೊಲೆ ಆರೋಪದ ಮೇಲೆ ಜೈಲಿಗೆ ಕಳುಹಿಸಿದ್ದರು.
ಶಾಂತಿ ಅವರ ತಂದೆ ಈ ಕುರಿತು ಹೇಳಿಕೆ ನೀಡಿದ್ದು, ನನ್ನ ಮಗಳು ನಾಪತ್ತೆಯಾಗಿರುವ ಮಾಹಿತಿ ಬಂದಿತು. ನಾನು ಅವಳ ಅತ್ತೆಯ ಮನೆಗೆ ಹೋಗಿ ಪರಿಶೀಲಿಸಿದರೂ ಪ್ರಯೋಜನವಾಗಲಿಲ್ಲ. ಒಂದು ವರ್ಷ ನನ್ನ ಮಗಳನ್ನು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಆಕೆಯ ಅತ್ತೆ, ಗಂಡ ಮೋಟಾರ್ ಬೈಕ್ ಮತ್ತು 50,000 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆಯ ತಂದೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ದಿನೇಶ್ ವಿರುದ್ಧ FIR ದಾಖಲಿಸಿ, ಅವರನ್ನು ಬಂಧಿಸಲಾಯಿತು. ಆದರೇ ಶಾಂತಿ ಮೃತದೇಹ ಪತ್ತೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಶಾಂತಿಯ ಮೊಬೈಲ್ ಪೋನ್ ಸ್ಥಳವನ್ನು ಪತ್ತೆಹಚ್ಚಿದಾಗ ಪ್ರಕರಣಕ್ಕೆ ತಿರುವು ಸಿಕ್ಕಿತು.
ಶಾಂತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದವರಿಗೆ ಆಘಾತ ಕಾದಿತ್ತು. ಮಹಿಳೆ ಪಂಜಾಬಿನ ಜಲಂಧರ್ ಜಿಲ್ಲೆಯಲ್ಲಿ ತನ್ನ ಪ್ರೇಮಿಯೊಂದಿಗೆ ವಾಸವಿದ್ದಳು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.