ಬಳ್ಳಾರಿ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದ ಹತ್ತಿರ ನಡೆದಿದೆ. ಅಲ್ಲದೇ, ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಒಂದೇ ಬೈಕ್ ನಲ್ಲಿ ಐವರು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಬೈಕ್ ಓಡಿಸುತ್ತಿದ್ದವನ ನಿರ್ಲಕ್ಷ್ಯದಿಂದಾಗಿ ಈ ದುರ್ಘಟನೆ ನಡೆದಿದೆ.
ಹೊಸಪೇಟೆ ಮೂಲದ ಜಂಬುನಾಥ್‌ಹಳ್ಳಿಯ ವೆಂಕಟೇಶ(46), ಹೊಸಪೇಟೆಯ ಅಖಿಲಾ(06), ಆಶಾ (08) ಸಾವನ್ನಪ್ಪಿದ ದುರ್ದೈವಿಗಳು. ನಾಲ್ಕು ವರ್ಷದ ಸರಸ್ವತಿ ಹಾಗೂ ಜಂಬಕ್ಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.