ಉತ್ತರ ಕನ್ನಡ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(Joida)ತಾಲೂಕಿನ ಚೌಕನಗಾಳಾಯದಲ್ಲಿ ನಡೆದಿದೆ. ದಾಂಡೇಲಿಯ ರಾಕೇಶ್ ಬಡಿಗೇರ, ರಿತೇಶ್ ಸುಬ್ರಹ್ಮಣ್ಯ ನಾಯರ್ ಹಾಗೂ ಕೃಷ್ಣ ಹರಿಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೈಕ್ ಸವಾರನ ವೇಗ ಹಾಗೂ ಅಜಾಗರೂಕತೆಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಜೋಯಿಡಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.