ರಸ್ತೆ ಅಪಘಾತ | ರಸ್ತೆಯಲ್ಲೇ ಒದ್ದಾಡಿ ಮೃತಪಟ್ಟ ಬೈಕ್ ಸವಾರರು
ತುಮಕೂರು: ಟಾಟಾ ಏಸ್ ಹಾಗೂ ದ್ವಿಚಕ್ರ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ನಡೆದಿದೆ.
ರಾಮಗಿರಿ ಮೂಲದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಅಪಘಾತ ಬಳಿಕ ಇಬ್ಬರು ರಸ್ತೆಯಲ್ಲಿ ಬಿದ್ದು ಒದ್ದಾಡಿ ಮೃತಪಟ್ಟ ಬೈಕ್ ಸವಾರರು ಸಾವನ್ನಪ್ಪಿದ್ದಾರೆ.
ರಾಂಗ್ ಸೈಡ್ ನಲ್ಲಿ ಬಂದು ಟಾಟಾ ಏಸ್ ಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಟಾಟಾ ಏಸ್ ವಾಹನ ಓರ್ವ ಗಾಯಾಳನ್ನು 200 ಮೀ ಎಳೆದುಕೊಂಡು ಹೋಗಿದೆ. ಬಳಿಕ ಕೆಲಕಾಲ ನರಳಾಡಿದ ವ್ಯಕ್ತಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾನೆ. ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಾರಿ ನಿಯಮ ಪಾಲಿಸದಿದ್ದಕ್ಕೆ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ.