ಬೆಂಗಳೂರು ವಿಜಯನಗರ ಪೊಲೀಸರಿಂದ ಬೈಕ್ ಕಳ್ಳರ ಬಂಧನ
ಬೆಂಗಳೂರು : ನಗರದ ವಿಜಯನಗರ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ತಿಕ್ ಹಾಗೂ ಕಬೀರ್ ಪಾಷಾ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ವಿಜಯನಗರ ಕೆಪಿ ಅಗ್ರಹಾರ ತಲಘಟ್ಟಪುರ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು.
ಇದೀಗ ಇವರ ಬಂಧನವಾಗಿದ್ದು, ಬಂಧಿತರಿಂದ 2.2 ಲಕ್ಷ ಮೌಲ್ಯದ 5 ಬೈಕ್ ವಶಕ್ಕೆ ಪಡೆಯಲಾಗಿದೆ.
ಇನ್ನು ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.