Bill Gates : ಮೋದಿ ಭೇಟಿ ಬಳಿಕ ಭಾರತವನ್ನ ಹಾಡಿಹೊಗಳಿದ ಬಿಲ್ ಗೆಟ್ಸ್…
ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿದೆ ಮತ್ತು ದೇಶಕ್ಕೆ ಭೇಟಿ ನೀಡುವುದು ತುಂಬಾ ಸ್ಫೂರ್ತಿದಾಯಕವಾಗಿದೆ ಎಂದು ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಭಾರತವನ್ನ ಹೊಗಳಿದ್ದಾರೆ.
ದೆಹಲಿ ಪ್ರವಾಸದ ವೇಳೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಿಲ್ ಗೇಟ್ಸ್ ತಮ್ಮ ಅಧಿಕೃತ ಬ್ಲಾಗ್ ‘ಗೇಟ್ಸ್ ನೋಟ್ಸ್’ನಲ್ಲಿ ಭಾರತದ ಅಭಿವೃದ್ಧಿಯನ್ನು ಮತ್ತು ಮೋದಿಯವರನ್ನ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಇಡೀ ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತದಂತಹ ಸೃಜನಶೀಲ ಮತ್ತು ಕ್ರಿಯಾಶೀಲ ದೇಶಕ್ಕೆ ಭೇಟಿ ನೀಡುವುದು ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ಗೇಟ್ಸ್ ಹೇಳಿದ್ದಾರೆ.
ಕರೋನಾ ಅವಧಿಯಲ್ಲಿ, ಲಸಿಕೆಗಳನ್ನ ದೊಡ್ಡ ಪ್ರಮಾಣದಲ್ಲಿ ಸರಬರಾಜು ಮಾಡಲಾಯಿತು ಮತ್ತು ಲಕ್ಷಗಟ್ಟಲೆ ಜೀವಗಳನ್ನು ಉಳಿಸಲಾಯಿತು, ಇತರ ದೇಶಗಳಿಗೆ ಅವುಗಳನ್ನು ಒದಗಿಸುವ ಮೂಲಕ ಸ್ನೇಹವನ್ನು ತೋರಿಸಲಾಯಿತು. ಕೋವಿನ್ ಆ್ಯಪ್ ಜಗತ್ತಿಗೆ ಮಾದರಿಯಾಗಲಿದೆ ಎಂದು ಪ್ರಧಾನಿ ಮೋದಿ ನಂಬಿದ್ದರು ಮತ್ತು ಅದನ್ನು ನಾನು ಸಹ ಒಪ್ಪುತ್ತೇನೆ ಎಂದು ಗೇಟ್ಸ್ ಹೇಳಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ತಾನು ಹೆಚ್ಚು ಪ್ರಯಾಣಿಸದಿದ್ದರೂ, ಕೋವಿಡ್ -19 ಲಸಿಕೆ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಮೋದಿಯೊಂದಿಗೆ ವಿಶೇಷವಾಗಿ ಮಾತನಾಡಿದ್ದೇನೆ ಎಂದು ಬಿಲ್ ಗೇಟ್ಸ್ ನೆನಪಿಸಿಕೊಂಡರು.
ಕರೋನಾ ಸಮಯದಲ್ಲಿ ಭಾರತ 200 ಮಿಲಿಯನ್ ಮಹಿಳೆಯರು ಸೇರಿದಂತೆ 300 ಮಿಲಿಯನ್ ಜನರಿಗೆ ತುರ್ತು ಡಿಜಿಟಲ್ ಪಾವತಿಗಳನ್ನು ಮಾಡಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಸರ್ಕಾರಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಜಿ-20 ಶೃಂಗಸಭೆಯ ಭಾರತದ ಅಧ್ಯಕ್ಷತೆಯ ಕುರಿತು ಮಾತನಾಡಿದ ಗೇಟ್ಸ್, ದೇಶದ ಆವಿಷ್ಕಾರಗಳಿಂದ ಜಗತ್ತು ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ತೋರಿಸಲು ಇದು ಉತ್ತಮ ಅವಕಾಶ ಎಂದು ಬಿಲ್ ಗ್ರೇಟ್ಸ್ ಹೇಳಿದರು. ಭಾರತವು ತನ್ನ ಆವಿಷ್ಕಾರಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಆಶಿಸುತ್ತಿದೆ ಎಂದು ಗೇಟ್ಸ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
Bill Gates: After meeting Modi, Bill Gates praised India…