ಬಿಪಿನ್ ರಾವತ್ ಅವರ ಮರಣವನ್ನು ಸಂಭ್ರಮಿಸಿದ್ದ ಕಿಡಿಗೇಡಿಯ ಬಂಧನ
ರಾಜಸ್ಥಾನ : ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅಗಲಿಕೆಯಿಂದ ಇಡೀ ದೇಶವೇ ದುಃಖದಲ್ಲಿದ್ರೆ ಕೆಲ ಕಿಡಿಗೇಡಿಗಳು, ದೇಶದ್ರೋಹಿಗಳ ಅವರ ನಿಧನದ ಸುದ್ದಿಯಿಂದ ಸಂಭ್ರಮಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನ ಹಾಕಿ ವಿಕೃತಿ ಮರೆದಿದ್ದಾರೆ.. ಆದ್ರೆ ಇಂತಹ ಹುಳ ಅಪಟೆಗಳ ಬೇಟೆಯಾಡಲೂ ಪೊಲೀಸರು ಶುರು ಮಾಡಿದ್ಧಾರೆ..
ಹೀಗೆಯೇ ಸಾಮಾಜಿಕ ಮಾಧ್ಯಮದಲ್ಲಿ ರಾವತ್ ಅವರ ಸಾವಿನ ಸಂಭ್ರಮಾಚರಣೆಯನ್ನು ನಡೆಸಿದ್ದ ಕಿಡಿಗೇಡಿಯೊಬ್ಬನನ್ನ ಇದೀಗ ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಜವ್ವಾದ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಜನರಲ್ ರಾವತ್ ಅವರ ಚಿತ್ರವನ್ನು ಹಂಚಿಕೊಂಡಿದ್ದನು. ಇದರೊಂದಿಗೆ ಜಹನ್ನೂಮ್ ಮುಟ್ಟುವ ಮೊದಲೇ ಜೀವಂತವಾಗಿ ಸುಟ್ಟುಹೋದರು ಎಂಬ ಅವಹೇಳನಕಾರಿ ಸಾಲನ್ನೂ ಬರೆದು ಹಾಕಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದಂತೆ ರಾಜಸ್ಥಾನದ ಟೋಂಕ್ ಪೊಲೀಸರು ಆರೋಪಿ ಜವ್ವಾದ್ ಖಾನ್‍ನನ್ನು ಬಂಧಿಸಿದ್ದಾರೆ.
ಇದರ ಬಳಿಕ ಟ್ವಿಟ್ಟರ್‌ನಲ್ಲಿ ಟೋಂಕ್ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಅವಹೇಳನಕಾರಿ ಹೇಳಿಕೆಯ ಮೇಲೆ ಅಬ್ದುಲ್ ನಕ್ಕಿ ಖಾನ್‍ರ ಮಗ ಜವ್ವಾದ್ ಖಾನ್‍ನನ್ನು ಬಂಧಿಸಲಾಗಿದೆ. 21 ವಯಸ್ಸಿನ ಈತ ರಾಜ್ ಟಾಕೀಸ್ ಬಳಿಯ ನಿವಾಸಿಯಾಗಿದ್ದಾನೆ. ಡಿಸೆಂಬರ್ 8ರಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿರುವುದರಿಂದ ಆರೋಪಿಯನ್ನು ಬಂಧಿಸಲು ನಾಲ್ಕು ವಿಶೇಷ ತಂಡಗಳ ರಚನೆ ಮಾಡಲಾಗಿತ್ತು. ಅವನನ್ನು ಸದ್ಯ ಬಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಜವ್ವಾದ್ ಖಾನ್ ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಪ್ರೊಫೈಲ್‍ನಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಎಂದೂ ಬರೆದುಕೊಂಡಿದ್ದಾನೆ.