ಮಣಿಪುರದ ಮುಖ್ಯಮಂತ್ರಿಯಾಗಿ ಎನ್ ಬಿರೇನ್ ಸಿಂಗ್ ಪ್ರಮಾಣ ವಚನ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಎನ್ ಬಿರೇನ್ ಸಿಂಗ್ ಸೋಮವಾರ ಇಂಪಾಲ್ ರಾಜಭವನದಲ್ಲಿ ಮಣಿಪುರದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಎನ್ ಬಿರೇನ್ ಸಿಂಗ್ ಹಾಗೂ ಐವರು ಸಂಪುಟ ಸಚಿವರಿಗೆ ರಾಜ್ಯಪಾಲ ಲಾ ಗಣೇಶನ್ ಪ್ರಮಾಣ ವಚನ ಬೋಧಿಸಿದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜು ಭಾನುವಾರ ಗಣೇಶನ್ ಅವರಿಗೆ ಪತ್ರವನ್ನು ಹಸ್ತಾಂತರಿಸಿದ್ದು, ಸಿಂಗ್ ಅವರು 32 ಶಾಸಕರನ್ನು ಹೊಂದಿರುವ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ಮಣಿಪುರದಲ್ಲಿ ಮುಂದಿನ ಸರ್ಕಾರ ರಚಿಸಲು ರಾಜ್ಯಪಾಲರು ಸಿಂಗ್ ಅವರನ್ನು ಆಹ್ವಾನಿಸಿದರು. Biren Singh sworn in as Manipur CM, five others take oath as cabinet ministers