ಇಂದು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 58 ನೇ ವಸಂತಕ್ಕೆ ಕಾಲಿಟ್ಟಿರುವ ಶಿವಣ್ಣನಿಗೆ ಸೋಶಿಯಲ್ ಮೀಡಿಯಾಗಳ ಮೂಲಕ ಸಿನಿಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಇತ್ತ ಶಿವಣ್ಣ, ಕಳೆದ ಮಧ್ಯರಾತ್ರಿ ತಮ್ಮ ಆಪ್ತರೊಂದಿಗೆ ಕೇಕ್ ಕಟ್ ಮಾಡಿ, ಸರಳವಾಗಿ ಬರ್ತ್ಡೇ ಆಚರಿಸಿಕೊಂಡರು. ಕಳೆದ ವರ್ಷ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷವೂ ಕೊರೊನಾ ಭೀತಿ ಇರೋದ್ರಿಂದ ಬೆಂಗಳೂರಿನಿಂದ ದೂರ ಹೋಗಿ ತಮ್ಮ ಪತ್ನಿ ಗೀತಾ ಹಾಗೂ ಇನ್ನಿತರೆ ಆಪ್ತರೊಟ್ಟಿಗೆ ಸಂಭ್ರಮಾಚರಣೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಕೊರೊನಾ ಹಿನ್ನೆಲೆ ನಾನು ಮನೇಲಿ ಇರಲ್ಲ. ಯಾರು ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು ಶಿವಣ್ಣ.








