BJP :ಮೋದಿಯಂತಹ ಒಬ್ಬ ಪ್ರಧಾನಿ ದೇಶಕ್ಕೆ ಸಿಕ್ಕಿರೋದು ಸೌಭಾಗ್ಯ – ಬಿಎಸ್ ವೈ
ಬಿಜೆಪಿ ಅಧಿಕಾರಕ್ಕೆ ತರೋದನ್ನ ತಡಿಯೋ ಶಕ್ತಿ ಯಾರಿಗೂ ಇಲ್ಲ.. ಅನೇಕರು ನಾವೇ ನೆಕ್ಸ್ಟ್ ಸಿಎಂ ಅಂತಾ ತಿರುಕನ ಕನಸು ಕಾಣ್ತಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ..
ಕಲಬುರಗಿಯಲ್ಲಿ ಮಾತನಾಡಿದ ಬಿಎಸ್ ವೈ, ಅನೇಕರು ನಾವೇ ನೆಕ್ಸ್ಟ್ ಸಿಎಂ ಅಂತಾ ತಿರುಕನ ಕನಸು ಕಾಣ್ತಿದ್ದಾರೆ. ಅದ್ಯಾವುದು ಕಾರ್ಯರೂಪಕ್ಕೆ ಬರಲು ಸಾದ್ಯವಿಲ್ಲ..
ನಿಶ್ಚಿತವಾಗಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಮೋದಿಯಂತಹ ಒಬ್ಬ ಪ್ರಧಾನಿ ದೇಶಕ್ಕೆ ಸಿಕ್ಕಿರೋದು ಸೌಭಾಗ್ಯ. ಆ ನಾಯಕನ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಗ್ಯಾರೆಂಟಿ.
ರಾಜ್ಯದ ಉದ್ದಗಲಕ್ಕೂ ಈಗಾಗಲೇ ಪ್ರವಾಸ ಆರಂಭವಾಗಿದೆ. ಇವತ್ತು ನಡ್ಡಾ ಜಿ ಬಂದಿದ್ದಾರೆ ಮುಂದೆ ಮೋದಿಯವರು ಬರೋರಿದ್ದಾರೆ. ಕರ್ನಾಟಕಕ್ಕೆ ಇನ್ನೂ ಎರಡ್ಮೂರು ಬಾರಿ ಬರೋರಿದ್ದಾರೆ ಎಂದಿದ್ದಾರೆ..