ಸ್ಯಾನಿಟೈಸರ್ ಬಾಟಲ್ ಮೇಲೆ ಬಿಜೆಪಿ ಅಭ್ಯರ್ಥಿ ಚಿತ್ರ
ಬೆಂಗಳೂರು : ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆ ಮತದಾನ ಆರಂಭವಾಗಿದ್ದು, ಮತದಾರರು ಮತಗಟ್ಟೆಗಳತ್ತ ಧಾವಿಸಿ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಪ್ರತಿಯೊಂದು ಮತಗಟ್ಟೆಗಳಲ್ಲಿ ಕೊರೊನಾ ಸೋಂಕು ಹರಡದಂತೆ ಸಂಪೂರ್ಣ ವ್ಯವಸ್ಥಿತವಾಗಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಟೆಸ್ಟಿಂಗ್ ಮೂಲಕ ಜ್ವರ ತಪಾಸಣೆ ನಡೆಸಲಾಗುತ್ತಿದೆ. ಸ್ಯಾನಿಟೈಜರ್ ಹಾಕಿ ಮತಗಟ್ಟೆಗಳ ಒಳಗೆ ಬಿಡಲಾಗುತ್ತಿದೆ.
ಇದನ್ನೂ ಓದಿ : ಉಪಚುನಾವಣೆ : ತಪ್ಪದೇ ಮತ ಚಲಾಯಿಸಿ ಎಂದು ಸಿಎಂ ಮನವಿ
ಈ ಮಧ್ಯೆ ಮತಗಟ್ಟೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಕ್ಕೆ ಇಟ್ಟಿರುವ ಸ್ಯಾನಿಟೈಸರ್ ಬಾಟಲ್ ಮೇಲೆ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾವಚಿತ್ರವನ್ನ ಅಂಟಿಸಲಾಗಿದೆ ಎನ್ನಲಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರ್ ಆರ್ ನಗರದ ಲಗ್ಗೆರೆ ವಾರ್ಡ್ ನ ಲಕ್ಷ್ಮೀದೇವಿ ನಗರದಲ್ಲಿ, ಜೆಡಿಎಸ್ ಪಕ್ಷದ ಬೂತ್ ನಲ್ಲಿ ಈ ಘಟನೆ ನಡೆದಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪೊಲೀಸರು, ಚುನಾವಣಾ ಆಯೋಗ ನೀತಿ ಸಂಹಿತೆ ಇದ್ದರೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗ್ತಿದೆ.
ಇನ್ನು ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಪ್ರಚಾರವನ್ನು ಮತದಾನದ ಹಿಂದಿನ ದಿನವೇ ನಿಲ್ಲಿಸಬೇಕು.
ಇದನ್ನೂ ಓದಿ : ಆರ್.ಆರ್ ನಗರ, ಶಿರಾದಲ್ಲಿ ಬಿರುಸಿನ ಓಟಿಂಗ್; ಕೊರೊನಾ ಅಲರ್ಟ್..ಗೊಂದಲ, ಅವ್ಯವಸ್ಥೆ..!
ಜೊತೆಗೆ ಮತದಾನದ ದಿನ ಯಾವುದೇ ರೀತಿಯ ಪ್ರಚಾರ ಮಾಡುವಂತಿಲ್ಲ. ಆದ್ರೆ ಇದೀಗ ಮತಗಟ್ಟೆಯಲ್ಲಿ ಮುನಿರತ್ನ ಫೋಟೋ ಇರುವ ಸ್ಯಾನಿಟೈಸರ್ ಬಾಟಲ್ ಬಳಸುತ್ತಿರುವುದು ನೀತಿ ಸಂಹಿತೆ ಉಲ್ಲಂಘನೆಯಾದಂತಾಗಿದೆ.
ಇನ್ನು ರಾಜರಾಜೇಶ್ವರಿ ನಗರದಲ್ಲಿ ಈಗಾಗಲೇ ಮತದಾನ ಆರಂಭವಾಗಿದ್ದು, 11 ಗಂಟೆಯವರೆ 14.44 ರಷ್ಟು ಮತದಾನ ನಡೆದಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರಕ್ಕೆ ಮಾಕಿರ್ಂಗ್ ಹಾಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಮತದಾನಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಟೆಸ್ಟಿಂಗ್ ಮೂಲಕ ಜ್ವರ ತಪಾಸಣೆ ನಡೆಸಿ ಸ್ಯಾನಿಟೈಜರ್ ಹಾಕಿ ಮತಗಟ್ಟೆಗಳ ಒಳಗೆ ಬಿಡಲಾಗುತ್ತಿದೆ.
ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೂ ಒಂದು ಹ್ಯಾಂಡ್ ಗ್ಲೌಸ್ ನೀಡಲಾಗುತ್ತದೆ. ಜತೆಗೆ ಮತದಾನಕ್ಕೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮತದಾರರು ಮಾಸ್ಕ್ ತರದೇ ಹೋದರೆ ಅಲ್ಲೇ ಮಾಸ್ಕ್ ನೀಡಿ ಮತಗಟ್ಟೆಗೆ ಪ್ರವೇಶ ನೀಡಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel