ಬೆಂಗಳೂರು: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಮತದಾನ ಚುರುಕು ಪಡೆದಿದೆ. ಬೆಳಿಗ್ಗೆ 7 ಗಂಟೆ ಮತದಾನ ಆರಂಭವಾಗಿದ್ದು, ಮತದಾರರು ಮತಗಟ್ಟೆಗಳತ್ತ ಧಾವಿಸಿ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಪ್ರತಿಯೊಂದು ಮತಗಟ್ಟೆಗಳಲ್ಲಿ ಕೊರೊನಾ ಸೋಂಕು ಹರಡದಂತೆ ಸಂಪೂರ್ಣ ವ್ಯವಸ್ಥಿತವಾಗಿ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಸಾಮಾಜಿಕ ಅಂತರಕ್ಕೆ ಮಾಕಿರ್ಂಗ್ ಹಾಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಟೆಸ್ಟಿಂಗ್ ಮೂಲಕ ಜ್ವರ ತಪಾಸಣೆ ನಡೆಸಿ ಸ್ಯಾನಿಟೈಜರ್ ಹಾಕಿ ಮತಗಟ್ಟೆಗಳ ಒಳಗೆ ಬಿಡಲಾಗುತ್ತಿದೆ.
ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೂ ಒಂದು ಹ್ಯಾಂಡ್‍ಗ್ಲೌಸ್ ನೀಡಲಾಗುತ್ತದೆ. ಹ್ಯಾಂಡ್ ಗ್ಲೌಸ್ ಹಾಕಿಕೊಂಡೇ ಇವಿಎಂಗಳಲ್ಲಿ ಮತದಾನ ಮಾಡಿ ಹೊರಬಂದ ಬಳಿಕ ಡಸ್ಟ್ ಬಿನ್‍ಗಳಲ್ಲಿ ಗ್ಲೌಸ್ ತೆಗೆದು ಹಾಕಬೇಕು. ಜತೆಗೆ ಮತದಾನಕ್ಕೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮತದಾರರು ಮಾಸ್ಕ್ ತರದೇ ಹೋದರೆ ಅಲ್ಲೇ ಮಾಸ್ಕ್ ನೀಡಿ ಮತಗಟ್ಟೆಗೆ ಪ್ರವೇಶ ನೀಡಲಾಗುತ್ತಿದೆ.
ಆರ್.ಆರ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಭೇಟಿ ಮತದಾನದ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಮತದಾನಕ್ಕೆ ಕೈ ಗ್ಲೌಸ್ ಕೊಡಲೂ ಕಂಜೂಸ್..!
ಆರ್.ಆರ್ ನಗರದ ಕೆಲ ಮತಗಟ್ಟೆಗಳಲ್ಲಿ ಕೇವಲ ಸ್ಯಾನಿಟೈಸ್ ಮಾಡುತ್ತಿದ್ದ ಆರೋಗ್ಯ ಸಿಬ್ಬಂದಿ, ಕೆಲವೆಡೆ ಕೈಗ್ಲೌಸ್ ನೀಡಲು ಕಂಜೂಸ್ ಮಾಡಿದ ಘಟನೆಗಳೂ ನಡೆದಿದೆ. ಮತದಾನದ ಬಳಿಕ ಹ್ಯಾಂಡ್ ಗ್ಲೌಸ್ ಡಿಸ್ಪೋಸ್ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಮತದಾನ ಮಾಡಲು ಕೊಟ್ಟ ಕೈಗ್ಲೌಸ್ ತೆಗೆದು ಕಸದ ಬುಟ್ಟಿಗೆ ಹಾಕಲು ವ್ಯವಸ್ಥೆ ಇಲ್ಲ. ಹೀಗಾಗಿ ಕೈಗ್ಲೌಸ್ ಗಳನ್ನು ರಸ್ತೆಗಳಲ್ಲಿ ಎಸೆಯುವ ಸಾಧ್ಯತೆ ಹೆಚ್ಚಾಗಿದೆ.
ಕೆಲ ಮತಗಟ್ಟೆಯಲ್ಲಿ ಮಾತ್ರ ಡಸ್ಟ್ ಬಿನ್ ಅಳವಡಿಕೆ ಮಾಡಲಾಗಿದೆ. ಬೂತ್ 141, 141/ಂರಲ್ಲಿ ಗ್ಲೌಸ್ ಡಿಸ್ಪೋಸ್ ವ್ಯವಸ್ಥೆ ಇಲ್ಲ. 143, 153 ನಲ್ಲಿ ಕಸದ ಬುಟ್ಟಿಯ ವ್ಯವಸ್ಥೆ ಇಲ್ಲ. ಹೀಗಾಗಿ ಮತದಾನಕ್ಕೆ ಕೊಟ್ಟ ಕೈಗವಸು ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಕೊರತೆ
ಆರ್.ಆರ್ ನಗರ ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆ ಹೆಚ್ಚಳ ಆಗಿರೋದ್ರಿಂದ ಮತಗಟ್ಟೆ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಮತದಾರರಿಗೆ ಬೂತ್ ಸಂಖ್ಯೆ, ಹೆಸರು ಪರಿಶೀಲನೆ ಮಾಡಬೇಕಾದ ಬೂತ್ ಮಟ್ಟದ ಅಧಿಕಾರಿಗಳ ಕೊರತೆ ಸಾಮಾನ್ಯವಾಗಿತ್ತು.
ಕೆಲವೆಡೆ ಕುಳಿತುಕೊಳ್ಳಲು ಟೇಬಲ್ , ಕುರ್ಚಿ ವ್ಯವಸ್ಥೆಯೂ ಇಲ್ಲ. ಹೀಗಾಗಿ ಪೊಲೀಸರ ಬಳಿ ಬಂದು ಮತದಾರರು ಗೊಂದಲ ಪರಿಹರಿಸಿಕೊಂಡರೆ, ಯಶವಂತಪುರ ವಾರ್ಡ್‍ಗೆ 35 ಜನ ಬಿಎಲ್‍ಒಗಳಿದ್ರೂ ಮತಗಟ್ಟೆಗಳಿಗೆ ಸರಿಯಾಗಿ ಹಂಚಿಕೆಯಾಗಿಲ್ಲ ಎನ್ನಲಾಗಿದೆ.
ಮತದಾರರ ಹೆಸರೇ ಡಿಲೀಟ್..!
ಆರ್.ಆರ್ ನಗರ ಕ್ಷೇತ್ರದ ರಾಜೀವ್ ಗಾಂಧಿನಗರ ನಿವಾಸಿ ಮಂಜುನಾಥ್ ಸೇರಿದಂತೆ ಹಲವರ ಹೆಸರೇ ಡಿಲೇಟ್ ಆಗಿದೆ. ಬೂತ್ ನಂಬರ್ 200, 200ಂ, 214, 214ಂ, 215, 215ಂಗಳಲ್ಲಿ ಮತದಾರರ ಹೆಸರು ಡಿಲೀಟ್ ಆಗಿದ್ದು, ಹೆಸರು ಡಿಲೀಟ್ ಆಗಿದ್ದಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel