ಶಿರಾ : ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ( bjp candidate rajesh gowda) ಅವರು ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಈ ಮಾಹಿತಿ ಪ್ರಕಾರ ರಾಜೇಶ್ ಗೌಡ( rajesh gowda ) ಅವರು ಕೋಟ್ಯಾಧಿಪತಿಯಾಗಿದ್ದು, ರೂ.15.25 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಇವರ ಪತ್ನಿ ಕೂಡ ರೂ.4.10 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
ರಾಜೇಶ್ ಗೌಡ ಅವರು ರೂ.9.92 ಕೋಟಿ ಚರಾಸ್ತಿ ಹಾಗೂ ರೂ.5.33 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಅವರ ಪತ್ನಿ ಬಳಿ ರೂ.2.80 ಕೋಟಿ ಚರಾಸ್ತಿ ಹಾಗೂ ರೂ.1.30 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಇದನ್ನೂ ಓದಿ : ಮೋದಿ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದ್ದಾರೆ : ಹೆಚ್.ಡಿ.ಕುಮಾರಸ್ವಾಮಿ
2019-20ನೇ ಸಾಲಿನಲ್ಲಿ ರೂ.2.57 ಕೋಟಿ ಆದಾಯಗಳಿಸಿದ್ದಾರೆ. ಪತ್ನಿ ರೂ.48 ಲಕ್ಷ ಆದಾಯ ಹೊಂದಿದ್ದಾರೆ.
ಐಷಾರಾಮಿ ಕಾರು ಪ್ರಿಯ ರಾಜೇಶ್ ಗೌಡ
ರಾಜೇಶ್ ಗೌಡ ಐಷಾರಾಮಿ ಕಾರುಗಳ ಪ್ರಿಯರಾಗಿದ್ದು, ಅವರ ಬಳಿ ರೂ.1.27 ಕೋಟಿ ಹಾಗೂ ರೂ.52 ಲಕ್ಷ ಮೌಲ್ಯದ ಎರಡು ಬಿಎಂಡಬ್ಲ್ಯೂ ಕಾರುಗಳು. ರೂ.34 ಲಕ್ಷ ಮೌಲ್ಯದ ಫೋರ್ಡ್, ರೂ.10.20 ಲಕ್ಷ ಮೌಲ್ಯದ ಹುಂಡೈ ಕಾರುಗಳಿವೆ. ಅವರ ಪತ್ನಿ ಡಾ.ತೇಜಸ್ವಿನಿ ಅವರ ಬಳಿಯೂ ರೂ.9.50 ಲಕ್ಷ ಮೌಲ್ಯದ ಹುಂಡೈ ಕಾರು ಇದೆ.
ಇದನ್ನೂ ಓದಿ : ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ : `ಎಚ್ಚೆತ್ಕೊಳಿ ಮೋದಿಯವರೇ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










