RSS ನಾಯಕ ಹಾಗೂ ಬಿಜೆಪಿ ಕೇಂದ್ರ ಸಚಿವರ ಮಗಳು ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ..!
RSS ನ ಹಿರಿಯ ನಾಯಕ ಹಾಗೂ ಕೇಂದ್ರ ಶಿಕ್ಷಣ ಸಚಿವರಾಗಿರುವ ರಮೇಶ್ ಪೋಟ್ರಿಯಾಲ್ ಅವರ ಮಗಳು ಇದೀಗ ಬಾಲಿವುಡ್ ಗೆ ನಾಯಕಿ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಹೌದು ಆರುಶಿ ನಿಶಾಂಕ್ ಬಾಲಿವುಡ್ ಗೆ ಎಂಟ್ರಿಯಾಗ್ತಿದ್ದು, ಅವರ ನಟನೆಯ ಮೊದಲ ಸಿನಿಮಾವೂ ಕೂಡ ಈಗಾಗಲೇ ಅದ್ಧೂರಿಯಾಗಿ ಸೆಟ್ಟೇರಿದೆ.
ಯೂಟ್ಯೂಬ್ ನಲ್ಲಿ ಮತ್ತೆ ಮಂಗ್ಲಿ ಹವಾ…! ಹೊಸ ಹಾಡು ಟ್ರೆಂಡಿಂಗ್ ನಲ್ಲಿ..!
ಅಂದ್ಹಾಗೆ ಆರುಶಿ ನಿಶಾಂಕ್ ಚೊಚ್ಚಲ ಸಿನಿಮಾದಲ್ಲೇ ಮಹಿಳಾ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಳ್ತಾಯಿದ್ದು, ಸಿನಿಮಾಗೆ ‘ತಾರಿಣಿ’ ಎಂದು ಟೈಟಲ್ ಇಡಲಾಗಿದೆ.
ಇನ್ನೂ ಆರುಶಿಗೆ 2015 ರಲ್ಲಿಯೇ ವಿವಾಹವಾಗಿತ್ತು. ಆದ್ರೆ ಈಗ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಅನ್ನು ಆರುಶಿ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. 
ಈ ಸಿನಿಮಾದಲ್ಲಿ ಆರುಶಿ ಮಹಿಳಾ ನೌಕಾದಳದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಇದೊಂದು ಪಕ್ಕಾ ಥ್ರಿಲ್ಲರ್ ಸಿನಿಮಾ ಎಬನ್ನಲಾಗಿದೆ.








