ಮತದಾನದ ವೇಳೆ ಯಡವಟ್ಟು – H D ರೇವಣ್ಣ ಮತ ಅಸಿಂಧುಗೊಳಿಸುವಂತೆ ಬಿಜೆಪಿ , ಕಾಂಗ್ರೆಸ್ ದೂರು
ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರು ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣನವರು ಮತದಾನದ ಸಂದರ್ಭದಲ್ಲಿ ಮತಪತ್ರವನ್ನ ಡಿ ಕೆ ಶಿವಕುಮಾರ್ ಗೆ ತೋರಿಸಿದ್ದಾರೆ ಎಂದು ಆರೋಪಿಸಿ ಅವರ ಮತವನ್ನು ಅಸಿಂಧುಗೊಳಿಸುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ.
ವಿಧಾನಸೌಧದದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಈ ನಡುವೆ ವೊಟಿಂಗ್ ಬಳಿಕ ಹೆಚ್.ಡಿ ರೇವಣ್ಣ ಅವರು ಮತ ಹಾಕಿದ್ದನ್ನ ಡಿ.ಕೆ ಶಿವಕುಮಾರ್ ಅವರಿಗೆ ತೋರಿಸಿದ್ದಾರೆ. ಹೀಗಾಗಿ ಹೆಚ್.ಡಿ ರೇವಣ್ಣರ ಮತವನ್ನ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಪೊಲೀಸ್ ಏಜೇಂಟ್ ಪ್ರಕಾಶ್ ರಾಥೊಡ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇದರಿಂದಾಗಿ ಕೆಲಕಾಲ ವಿಧಾನಸೌಧದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಚುನಾವಣಾ ಆಯೋಗ, ವಿಧಾನಸೌಧ ಕೊಠಡಿಯೊಳಗಿನ ವಿಡಿಯೊ ನೋಡಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಶಾಸಕರು ಮತ ಚಲಾಯಿಸುವಾಗ ಆಯಾ ಪಕ್ಷದ ಏಜೆಂಟರಿಗೆ ಮಾತ್ರ ತೋರಿಸಬೇಕು, ಬೇರೆ ಪಕ್ಷದ ಏಜೆಂಟರಿಗೆ ತೋರಿಸಬಾರದು ಎಂಬ ನಿಯಮವಿದೆ.