ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ
ಬೆಂಗಳೂರು : ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ ‘ಸ್ಪಂದನೆ’ ಇಲ್ಲದಾಗಿದೆ ಬಿಜೆಪಿಗೆ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಶಾಸಕ ವಿಶ್ವನಾಥ್ ಅವರು ಡ್ಯಾನ್ಸ್ ಮಾಡಿದ್ದಾರೆ. ಹೀಗಾಗಿ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕುಟುಕಿದ್ದು, ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ ‘ಸ್ಪಂದನೆ’ ಇಲ್ಲದಾಗಿದೆ ಬಿಜೆಪಿಗೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಸ್ವಯಂ ಕಲ್ಯಾಣ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಶೋಷಿತರಿಗೆ ಅನ್ಯಾಯವೆಸಗಿದೆ. ಬೋರ್ ವೆಲ್ ಹಗರಣ ನಡೆದಿರುವುದು ಇಲಾಖಾ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಭೀತಾಗಿದೆ. ಶೋಷಿತ ಸಮುದಾಯಗಳ ಪಾಲಿನ ಹಣ ಲೂಟಿ ಹೊಡೆದಿದ್ದೇ ಸರ್ಕಾರದ ಸಾಧನೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಆ ಕಾರಣಕ್ಕಾಗಿ ಸಂಭ್ರಮಾಚರಣೆಯೇ?

ರಾಜ್ಯದಲ್ಲಿ #BJPBrashtotsava ನಡೆಯುತ್ತಿರುವುದರ ವಿರುದ್ಧ ಹಲವರು ನ್ಯಾಯದ ನಿರೀಕ್ಷೆಯಲ್ಲಿ ಪ್ರಧಾನಿಗೆ ಪತ್ರ ಬರೆದರು. ಮೋದಿಯವರು “ಭ್ರಷ್ಟಾಚಾರದ ಮಹಾ ಪೋಷಕ” ಎಂಬುದು ಅವರಿಗೆ ತಿಳಿದಿಲ್ಲವೇನೋ ಪಾಪ! ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದ RUPSA ಸಂಘದ ವಿರುದ್ಧ ದ್ವೇಷದ ದಾಳಿ ಮಾಡುತ್ತಿದೆ ಸರ್ಕಾರ.
PSI ಅಕ್ರಮದಲ್ಲಿ ಬಿಜೆಪಿ ಶಾಸಕರ, ಸಚಿವರ ನೇರ ಕೈವಾಡವಿದ್ದರೂ ವಿಚಾರಣೆಯಿಂದ ವಿನಾಯಿತಿ ಅವರಿಗೆ! PSI ಅಭ್ಯರ್ಥಿಯಿಂದ ಬಿಜೆಪಿ ಶಾಸಕ ಹಣ ಪಡೆದಿರುವುದು ಬೆಳಕಿಗೆ ಬಂದರೂ, ಶಾಸಕರೇ ಒಪ್ಪಿಕೊಂಡರೂ ತನಿಖೆ ನಡೆಸದೆ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿರುವುದೇ ನಿಮ್ಮ ಸಾಧನೆಯೇ ಬಸವರಾಜ ಬೊಮ್ಮಾಯಿ ಅವರೇ #BJPBrashtotsava ದಲ್ಲಿ ಅಕ್ರಮವೆಲ್ಲ ಸಕ್ರಮವೇ ಎಂದು ಪ್ರಶ್ನಿಸಿದೆ.








