ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇಂದು ಕೊಲಾಹಲದ ದಿನ. ಮುಡಾ ಹಗರಣ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಇಂದು ಪಾದಯಾತ್ರೆ ಆರಂಭಿಸಲಿವೆ.
ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಜಂಟಿಯಾಗಿ ಮೈಸೂರು ಚಲೋ (Mysuru Chalo) ಪಾದಯಾತ್ರೆ ಹಮ್ಮಿಕೊಂಡಿದೆ. ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy), ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ (Yediyurappa) ಜಂಟಿಯಾಗಿ ಕೆಂಗೇರಿಯ ಕೆಂಪಮ್ಮ ದೇವಾಲಯದಲ್ಲಿ ಚಾಲನೆ ನೀಡಲಿದ್ದಾರೆ.
ಈ ಪಾದಯಾತ್ರೆಯು 124 ಕಿಲೋಮೀಟರ್ ಸಾಗಲಿದೆ. ಪಾದಯಾತ್ರೆಗೆ ಜೆಡಿಎಸ್ ಯಾವುದೇ ಷರತ್ತು ಹಾಕಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಪಾದಯಾತ್ರೆಗೆ ಸರ್ಕಾರ ಕೂಡ ಅನುಮತಿ ನೀಡಿದೆ.
ಮೈತ್ರಿ ಪಾದಯಾತ್ರೆ
* ಆ.3 – ಕೆಂಗೇರಿಯಲ್ಲಿ ಆರಂಭ. ಬಿಡದಿಯಲ್ಲಿ ವಾಸ್ತವ್ಯ
* ಆ.4 – ಬಿಡದಿಯಲ್ಲಿ ಆರಂಭ. ಕೆಂಗಲ್‌ನಲ್ಲಿ ವಾಸ್ತವ್ಯ
* ಆ.5 – ಕೆಂಗಲ್‌ನಲ್ಲಿ ಆರಂಭ. ನಿಡಘಟ್ಟದಲ್ಲಿ ವಾಸ್ತವ್ಯ
* ಆ.6 – ನಿಡಘಟ್ಟದಲ್ಲಿ ಆರಂಭ. ಮಂಡ್ಯದಲ್ಲಿ ವಾಸ್ತವ್ಯ
* ಆ.7 – ಮಂಡ್ಯದಲ್ಲಿ ಆರಂಭ. ತೂಬಿನಕೆರೆಯಲ್ಲಿ ವಾಸ್ತವ್ಯ
* ಆ.8 – ತೂಬಿನಕೆರೆಯಲ್ಲಿ ಆರಂಭ. ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
* ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ. ಮೈಸೂರು ಹೊರವಲಯದಲ್ಲಿ ವಾಸ್ತವ್ಯ
* ಆ.10 – ಮೈಸೂರು ಹೊರವಲಯದಲ್ಲಿ ಆರಂಭ. ವೇದಿಕೆಯಲ್ಲಿ ಅಂತ್ಯ ಮಾರ್ಗವಾಗಿ ಸಾಗಲಿದೆ.








