ಜೈಪುರ: ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಸದ್ಯದ ಮಾಹಿತಿಯಂತೆ ಅಲ್ಲಿ ಬಿಜೆಪಿ 60, ಕಾಂಗ್ರೆಸ್ 50, ಇನ್ನಿತರರು 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಅಲ್ಲಿ ಮುನ್ನಡೆ ಸಾಧಿಸುತ್ತಿದೆ. ರಾಜಸ್ಥಾನವು 199 ಕ್ಷೇತ್ರಗಳನ್ನು ಹೊಂದಿದ್ದು, 100 ಮ್ಯಾಜಿಕ್ ನಂಬರ್ ಆಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 100, ಬಿಜೆಪಿ 73, ಬಿಎಸ್ಪಿ 6, ಆರ್ಎಲ್ಪಿ 3, ಪಕ್ಷೇತರ ಅಭ್ಯರ್ಥಿಗಳ ಪೈಕಿ 13 ಜನ ಜಯ ಸಾಧಿಸಿದ್ದರು. ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಸಿಎಂ ಆಗಿ ಅಧಿಕಾರದ ಗದ್ದುಗೆ ಏರಿದ್ದರು. ಆದರೆ, ಪಿಸಿಸಿ ಆಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಹಾಗೂ ಸಿಎಂ ಗೆಹ್ಲೋಟ್ ನಡುವೆ ಅಧಿಕಾರಕ್ಕಾಗಿ ಕಾದಾಟ ನಡೆದಿತ್ತು. ಅವರಿಬ್ಬರ ಜಗಳದ ಲಾಭ ಮಾಡಿಕೊಳ್ಳಲು ಸದ್ಯ ಬಿಜೆಪಿ ಹವಣಿಸುತ್ತಿದೆ.