ಮಂಡ್ಯ : ಮಂಡ್ಯದಲ್ಲಿ ಬಿಜೆಪಿ ಆಪರೇಷನ್ ಮುಂದುವರೆದಂತೆ ತೋರುತ್ತಿದೆ.. ಯಾಕಂದ್ರೆ ಮಂಡ್ಯದಲ್ಲಿ ತೆರೆಮರೆಯಲ್ಲಿ ಪಕ್ಷ ಬಲವರ್ಧನೆಗಾಗಿ ಕಸರತ್ತು ಮುಂದುವರೆದಿದೆ. ಕೇಸರಿ ಪಡೆಯುವ ಪ್ರಭಾವಿ ಮುಖಂಡರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಗುಮಾನಿ ಎದ್ದಿದೆ..
ಇದೀಗ ಮಾಜಿ ಸಂಸದನಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿ ನಾಯಕರು ಎಲ್.ಆರ್.ಶಿವರಾಮೇಗೌಡರನ್ನ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ನಿಂದ ಉಚ್ಟಾಟನೆಗೊಂಡ ಬಳಿಕ ಮುಂದಿನ MLA ಚುನಾವಣೆಗೆ ತಯಾರಿ ನಡೆಸಿರುವ ಶಿವರಾಮೇಗೌಡರನ್ನ ತಮ್ಮ ಕಡೆಗೆ ಸೆಳೆಯುವ ಪ್ಲಾನ್ ನಲ್ಲಿದೆ ಕಮಲ ಪಡೆ..
ಶಿವರಾಮೇಗೌಡರು ನಾಗಮಂಗಲ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿ ಸಂಚಾರ ಮಾಡಿ ಎಲೆಕ್ಷನ್ ಗೆ ತಯಾರಿ ನಡೆಸುತ್ತಿದ್ದಾರೆ.
ಶಿವರಾಮೇಗೌಡ MLA ಚುನಾವಣೆಗೆ ರೆಡಿ ಆಗುತ್ತಿದ್ರೆ ಪುತ್ರ ಚೇತನ್ ಜಿಪಂ ಚುನಾವಣೆಗೆ ಸ್ಪರ್ಧಿಸಲು ಪ್ಲಾನ್ ಮಾಡಿಕೊಳ್ತಿದ್ದಾರೆ. ಇತ್ತೀಚೆಗೆ ನಡೆದ MLC ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಶಿವರಾಮೇಗೌಡರು ಪ್ರಚಾರವನ್ನೂ ನಡೆಸಿದ್ದರು.








