ನಾನು ಒಬ್ಬಂಟಿಗ ಅಂತ ಮಾತಾಡ್ತಿದ್ದಾರೆ , ಆದ್ರೆ ನಾನು ಒಂಟಿ ಸಲಗ : ಯತ್ನಾಳ್
ನಾನು ಒಬ್ಬಂಟಿಗ ಅಂತ ಹೇಳೋರು ಹೇಳ್ತಾರೆ. ಯಾರೂ ಇಲ್ಲದಿದ್ರೂ ನಾನು ಒಂಟಿ ಸಲಗನೇ. ಅಟಲ್ ಬಿಹಾರಿ ವಾಜಪೇಯಿಯವ್ರೂ ಇದನ್ನೇ ಹೇಳಿದ್ದಾರೆ. ನಿನ್ನ ಜತೆ ಯಾರೂ ಇಲ್ಲ ಅಂದ್ರೂ ನೀನೊಬ್ಬನೇ ನಡಿ ಅಂತ ವಾಜಪೇಯಿ ಹೇಳಿದ್ದಾರೆ. ನೊಟೀಸ್ ಬಂದ್ರೆ ನಾಳೆ ಮಾತಾಡ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ನೀಡಿದ್ದಾರೆ.
ತಮಗೆ ನೋಟೀಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಎಲ್ಲವನ್ನೂ ಎದುರಿಸುವ ಶಕ್ತಿ ನನಗೆ ಇದೆ. ನಾನು ಒಬ್ಬ ಶಾಸಕ. ಶಾಸಕಾಂಗ ಪಕ್ಷದ ಸಭೆಯಲ್ಲೂ ಮಾತಾಡಿದೀನಿ. ಸಂದರ್ಭ ಬಂದ್ರೆ ಪ್ರಧಾನಿಯವ್ರ ಗಮನಕ್ಕೂ ತರ್ತೇನೆ. ನಾನು ಯಾಕೆ ಮಾತಾಡಿದೆ ಅಂತ ಸ್ಪಷ್ಟೀಕರಣ ಕೊಡ್ತೇನೆ. ಯಾವ ಕಾರಣಕ್ಕಾಗಿ ನಾನು ಹೇಳಿಕೆ ಕೊಟ್ಟೆ ಅಂತ ಸ್ಪಷ್ಟೀಕರಣ ಕೊಡ್ತೇನೆ. ನಾಳೆ ನೋಟೀಸ್ ಬಂದ್ರೆ ಓದ್ಕೊಂಡು ನಂತರ ಈ ಸ್ಪಷ್ಟನೆ ಕೊಡ್ತೇನೆ ಎಂದಿದ್ದಾರೆ.
ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!
ಅಲ್ಲದೇ ಯತ್ನಾಳ್ ಅವರು ಹತಾಶೆಯಾಗಿದ್ದಾರೆಂದು ಒಬ್ರು ಹೇಳಿದ್ದಾರೆ. ಯತ್ನಾಳ್ ಗೆ ಬುದ್ಧಿಭ್ರಮಣೆ ಆಗಿದೆ ಅಂತ ಮತ್ತೊಬ್ರು ಹೇಳಿದಾರೆ. ಇಂಥ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ದೆಹಲಿಯಿಂದ ಇಬ್ಬರು ಬಂದು ರಾಜ್ಯದ ಶಾಸಕರ ದೂರು ಆಲಿಸಲಿ. ಇಲ್ಲಿ ಶಾಸಕರ ಸಭೆ ಕರೆಯುತ್ತಿಲ್ಲ. ವಿಭಾಗವಾರು ಸಭೆ ಕರೆದರೆ ಪ್ರಯೋಜನ ಇಲ್ಲ. ತುಂಡು ತುಂಡು ಮಾಡಿ ವಿಭಾಗವಾರು ಸಭೆ ಕರೆಯೋದು ಬೇಡ. ನಾನು ಮಂತ್ರಿ ಆಗಲ್ಲ. ಆದ್ರೆ ಮಂತ್ರಿ ಆಗಿಲ್ಲ ಅನ್ನೋ ಅಸಮಧಾನದಿಂದ ಯತ್ನಾಳ್ ಹೀಗೆ ಮಾತಾಡ್ತಿದಾರೆ ಅಂತ ಮಾಧ್ಯಮಗಳು ಸುದ್ದಿ ಮಾಡ್ತಿವೆ. ನಾನು ಮಂತ್ರಿ ಆಗ್ಬೇಕು ಅಂತ ಎಲ್ಲೂ, ಯಾವತ್ತೂ ಹೇಳಿಲ್ಲ. ನಾನು ಜನಪರ, ಜನಪರ ಹೇಳಿಕೆ ಕೊಟ್ಟಿದೀನಿ ಅಷ್ಟೇ. ನಾನು ಮಂತ್ರಿ ಆಗ್ಬೇಕು ಅಂತ ಮನಸು ಮಾಡಿದವನಲ್ಲ. ನಾನು ಯಾರ ಮುಲಾಜಿನಲ್ಲೂ ಇಲ್ಲ. ಸಿದ್ದರಾಮಯ್ಯ, ಜೆ ಎಚ್ ಪಟೇಲ್, ವೀರೇಂದ್ರ ಪಾಟೀಲರೇ ನನ್ನ ಹೊಗಳಿದ್ದಾರೆ. ನನ್ನ ಸ್ವಾರ್ಥಕ್ಕಾಗಿ ನಾನು ರಾಜಕಾರಣ ಮಾಡಿದವನಲ್ಲ. ಮೋದಿಯವರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯಲಿಲ್ಲ ಅಂದ್ರೆ ನಾನು ಟೀಕೆ ಮಾಡ್ತೀನಿ ಎಂದಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಪೂರಕ ಬಜೆಟ್ : ಸಚಿವ ಅರವಿಂದ ಲಿಂಬಾವಳಿ
ಅಲ್ದೇ ಉತ್ತರದವ್ರು ಸಿಎಂ ಆಗ್ತಾರೆ ಅಂತ ಹೇಳಿದ್ದೆ. ಉತ್ತರದವ್ರು ಸಿಎಂ ಆಗೋದನ್ನು ತಡೆಯಲು ಸಂಚು ನಡೀತಿದೆ. ಇದರ ಹಿಂದೆ ಯಾರಿದ್ದಾರೆ ಅಂತ ಎಲ್ರಿಗೂ ಗೊತ್ತು. ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೂ ಮುಮದುವರೆದು ಶಾಸಕರ ಭಾವನೆಗಳನ್ನು ಮುಚ್ಚಿಡಕ್ಕಾಗಲ್ಲ. ಕ್ರಾಂತಿಯನ್ನು ಮುಚ್ಚಿಡಕ್ಕಾಗಲ್ಲ. ಕ್ರಾಂತಿ ಒಮ್ಮೆಲೆ ಸ್ಫೋಟ ಆಗಲ್ಲ. ಆದ್ರೆ ಕ್ರಾಂತಿ ಆಗೋದು ಖಚಿತ ಕ್ರಾಂತಿ ಆದ ಮೇಲೆನೇ ಶಾಂತಿ ಉಳಿಯೋದು. ಈಗ ಶಾಸಕರು ಕೆಲವರು ಮೋದಿಯವ್ರಿಗೆ ಪತ್ರ ಬರೆದಿರೋದು ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಉಳಿದ ಶಾಲಾ ತರಗತಿಗಳ ಆರಂಭ: ಫೆ. 16ರಂದು ಸಭೆ : ಸುರೇಶ್ ಕುಮಾರ್
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








