ಘಾಜಿಯಾಬಾದ್ ; ಬಕ್ರೀದ್ ಹಬ್ಬಕ್ಕೆ ಪ್ರಾಣಿಗಳ ಬದಲಾಗಿ ಮುಸ್ಲಿಮರು ತಮ್ಮ ಮಕ್ಕಳನ್ನು ಬಲಿ ಕೊಡಲಿ ಎಂದು ಹೇಳಿಕೆ ನೀಡಿ ಫಾಜಿಯಾಬಾದ್ ನ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ ಗುರ್ಜರ್, ಮಾಂಸದಿಂದ ಕೊರೊನಾ ವೈರಸ್ ಹರಡುತ್ತಿದೆ. ಹೀಗಾಗಿ ಜನರು ಪ್ರಾಣಿಗಳನ್ನು ಬಲಿ ಕೊಡಬಾರದು. ಹಾಗೇ ಬಕ್ರೀದ್ ಹಬ್ಬಕ್ಕೆ ಪ್ರಾಣಿಗಳನ್ನು ಬಲಿ ಕೊಡುವ ಜನರು ತಮ್ಮ ಮಕ್ಕಳನ್ನು ಬಲಿ ಕೊಡಲಿ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಮುಂದುವರಿದು ಮಾತನಾಡುತ್ತ, ನಾವು ಜನರು ಮಾಂಸಾಹಾರ ಹಾಗೂ ಮದ್ಯಪಾನ ಮಾಡಲು ಬಿಡುವುದಿಲ್ಲ ಎಂದಿರುವ ಅವರು, ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮಸೀದಿಗಳು, ದೇವಾಲಾಯಕ್ಕೆ ತೆರಳದೆ, ನಮಾಜ್ ಹಾಗೂ ಪ್ರಾರ್ಥನೆ ಸಲ್ಲಿಸದೆ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ. ಅದೇ ರೀತಿಯಲ್ಲಿಯೇ ಪ್ರಾಣಿಗಳ ಬಲಿಕೊಡುವುದನ್ನೂ ಜನರು ಕೈಬಿಡಬೇಕು ಎಂದು ಹೇಳಿದ್ದಾರೆ.








