ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ : ಪಿ.ರಾಜೀವ್ p-rajeev saaksha tv
ಚಿಕ್ಕೋಡಿ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸೆಭೆ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
13 ಸೀಟುಗಳನ್ನ ಪಡೆದಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ತಯಾರಿ ಆರಂಭಿಸಿದೆ.
ಈ ಮಧ್ಯೆ ನಾಲ್ಕು ಸ್ಥಾನಗಳನ್ನ ಪಡೆದಿರುವ ಕಾಂಗ್ರೆಸ್ ಪಕ್ಷೇತರರನ್ನು ಕಟ್ಟಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಬಿಟ್ಟಿಗೆ ಹಾಕಿಕೊಳ್ಳಲು ಪ್ಲಾನ್ ಮಾಡುತ್ತಿದೆ ಎಂಬ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಬಿಜೆಪಿ ಶಾಸಕ ಪಿ.ರಾಜೀವ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಅಭ್ಯರ್ಥಿಗಳ ತಂಟೆಗೆ ಬಂದರೇ ಸುಮ್ಮನೆ ಬಿಡಲ್ಲ ಎಂದು ವಾರ್ನಿಂಗ್ ನೀಡಿದ್ದಾರೆ.
ಬಿಜೆಪಿ ಬಿ ಫಾರ್ಮ್ ಪಡೆದುಕೊಂಡು ಚುನಾಯಿತರಾಗಿರುವ ಅಭ್ಯರ್ಥಿಗಳ ತಂಟೆಗೆ ಬಂದರೇ ಯಾರನ್ನು ಸುಮ್ಮನೆ ಬಿಡಲ್ಲ.
ಕಸ ಹೊರಗೆ ಹಾಕಿದ ಹಾಗೆ ಹೊರಗೆ ಹಾಕುತ್ತೇನೆ. ನಮ್ಮ ಅಭ್ಯರ್ಥಿಗಳತ್ತ ಕೈ ಹಾಕಿದಾ ಅಂದರೆ ಕೈ ಹಾಕಿದವನ ಮನೆತನವನ್ನು ಒಳಗೆ ಹಾಕಲಿಲ್ಲ ಅಂದರೆ ನಾನು MLAನೇ ಅಲ್ಲ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.