ರಸ್ತೆ ಕಳಪೆ ಕಾಮಗಾರಿ | ಪ್ರೀತಂಗೌಡಗೆ ಸಾರ್ವಜನಿಕರ ತರಾಟೆ

1 min read
BJP MLA Pritham gouda hassan saaksha tv

 ರಸ್ತೆ ಕಳಪೆ ಕಾಮಗಾರಿ | ಪ್ರೀತಂಗೌಡಗೆ ಸಾರ್ವಜನಿಕರ ತರಾಟೆ

ಹಾಸನ : ರಸ್ತೆ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿ ಹಾಸನ ‌ಶಾಸಕ ಪ್ರೀತಂಗೌಡ ಅವರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಹಾಸನದ ಮಹಾವೀರ ಭವನ ರಸ್ತೆ‌ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈಗಾಗಿ  ಶಾಸಕ ಪ್ರೀತಂಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BJP MLA Pritham gouda hassan saaksha tv

ಈ ವೇಳೆ ಶಾಸಕರು ಗುತ್ತಿಗೆದಾರನ ಪರವಾಗಿಯೇ ಮಾತನಾಡಿದ್ದಾರೆ. ಇದರೊಂದಿಗೆ ಬೇಸರಗೊಂಡ ಸ್ಥಳೀಯರು,  ಶಾಸಕರ ವಿರುದ್ಧವೇ ಕಿಡಿಕಾರಿದ್ದಾರೆ.

ಇದೇ ವೇಳೆ  ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಪ್ರೀತಂಗೌಡ, ಪಾದಯಾತ್ರೆ ಮಾಡಿದ್ರೆ ಜನರು ಮತ ಹಾಕುತ್ತಾರೆ ಅಂತಾ ಅಂದುಕೊಂಡಿದ್ದಾರೆ.

ಸರ್ಕಾರದ ಆದೇಶ ಪಾಲನೆ ಮಾಡುವ ಸದ್ಭುದ್ಧಿ ಭಗವಂತ ಅವರಿಗೆ ಕೊಡಲಿ ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd