ಮರ್ಯಾದೆಯಿಂದ ವಾಪಸ್ ಹೋಗೋ ಲೇ | ಪೊಲೀಸ್ ಇನ್ಸ್ಪೆಕ್ಟರ್ ಗೆ ಬಿಜೆಪಿ ಶಾಸಕ ಆವಾಜ್
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಮತ್ತೆ ನಾಲಿಗೆಯನ್ನು ಹರಿಬಿಟ್ಟಿದ್ದು, ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಗೆ ಆವಾಜ್ ಹಾಕಿರೊ ಆಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಯ ಇನ್ಸ್ಪೆಕ್ಟರ್ ರವೀಶ್ ಅವರಿಗೆ ಆವಾಜ್ ಹಾಕಿರೊ ಆಡಿಯೋ ಇದಾಗಿದ್ದು, ಆಡಿಯೋದಲ್ಲಿ ನೀನು ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ. ಎಲ್ಲಿದ್ದೀಯಾ? ನಿನ್ನನ್ನ ಬೇಡ ಅಂತಾ ಹೇಳಿದ್ದೆ ತಾನೆ? ನೀನು ವಾಪಸ್ ಹೋಗು, ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ ಎಂದು ಆವಾಜ್ ಹಾಕಿದ್ದಾರೆ.
ಅಲ್ಲದೇ ಮರ್ಯಾದೆಯಿಂದ ವಾಪಸ್ ಹೋಗೋ ಲೇ. ನಾನು ಹೇಳಿದ ಹಾಗೆ ಕೇಳು, ಬೇಕಾದರೆ ರೆಕಾರ್ಡ್ ಮಾಡಿಕೊ. ಬಂದ ರೀತಿಯಲ್ಲೇ ವಾಪಸ್ ಹೋಗು, ನಾಳೆಯೇ ನಿನ್ನ ಡೆಪ್ಟೇಶನ್ ಮಾಡಿಸುತ್ತೇನೆ ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ.? ಯಾವನೂ ಐಜಿ.? ಐಜಿಯಲ್ಲ, ಮೂಡಿಗೆರೆಗೆ ನಾನೇ. ನನ್ನನ್ನು ನೋಡಲು ಬಂದರೆ ಒದ್ದು ಓಡಿಸುತ್ತೇನೆ ಎಂದು ಏಕ ವಸಚನದಲ್ಲೇ ಬೈದಿದ್ದಾರೆ.









