BJP | ಮೋದಿ ಕಾಂಗ್ರೆಸ್ ಪಕ್ಷವನ್ನು ರಾಮನಾಮ ಜಪಿಸುವಂತೆ ಮಾಡಿದ್ದಾರೆ
ಬೆಂಗಳೂರು : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ರಾಮ, ಸೀತೆ, ಹನುಮ ವೇಷಧಾರಿಗಳ ಜೊತೆ ಹೆಜ್ಜೆ ಹಾಕಿದ್ದು, ಈ ಬಗ್ಗೆ ಬಿಜೆಪಿ ಟ್ವಿಟ್ಟರ್ ನಲ್ಲಿ ಕುಟುಕಿದೆ.
ಈ ಸಂಬಂಧ ಮೊದಲು ರಾಜ್ಯ ಕಾಂಗ್ರೆಸ್ “ ‘ರಾಮಾಯಣ’ವನ್ನು ಆವರಿಸಿರುವುದು ರಾಮನ ವನವಾಸದ ಯಾತ್ರೆ, ವನವಾಸದ ಉದ್ದಕ್ಕೂ ಭಾರತವನ್ನು ಅನ್ವೇಷಿಸುತ್ತಾ, ಭಾರತದ ವೈವಿದ್ಯತೆಗಳು ಆಸ್ವಾದಿಸುತ್ತಾ, ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ನಡೆಯುತ್ತಾನೆ ರಾಮ. ರಾಹುಲ್ ಗಾಂಧಿ ಅವರು ಕೂಡ ಭಾರತದ ಶ್ರೇಷ್ಠತೆಯನ್ನು ಅನ್ವೇಷಿಸುತ್ತಾ ನಡೆಯುತ್ತಿದ್ದಾರೆ” ಎಂದು ಬರೆದುಕೊಂಡಿತ್ತು.

ಇದಕ್ಕೆ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿರುವ ರಾಜ್ಯ ಬಿಜೆಪಿ, ಶ್ರೀರಾಮನ ಆಸ್ತಿತ್ವದ ಕುರಿತು ಪ್ರಶ್ನೆ ಮಾಡಿದ ಕಾಂಗ್ರೆಸ್, ಕಾಲ್ಪನಿಕ ಎನ್ನುತ್ತಾ ರಾಮಸೇತು ಒಡೆಯಲು ಮುಂದಾಗಿತ್ತು. ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ವಿರೋಧಿಸಿ, ಬಾಬ್ರಿ ಕಟ್ಟಡದ ಪರ ಕಾಂಗ್ರೆಸ್ ವಾದಿಸಿತ್ತು. ರಾಮಾಯಣ, ರಾಮನಿಗೆ ಅವಮಾನ ಮಾಡಿದವರನ್ನು ಸಮ್ಮಾನಿಸಿದವರು ಇಂದು ಅಧಿಕಾರಕ್ಕಾಗಿ ರಾಮನ ಮೊರೆ ಹೋಗಿದ್ದಾರೆ.
https://twitter.com/BJP4Karnataka/status/1580826078104285185?s=20&t=u_NZKhz0v-htHnE3st69Og
ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಬೀದಿಗೆ ಬರುವಂತೆ ಮಾತ್ರ ಮಾಡಿದ್ದಲ್ಲ, ರಾಮನಾಮವನ್ನೂ ಜಪಿಸುವಂತೆ ಮಾಡಿದ್ದಾರೆ. ಅಂದ ಹಾಗೆ, ರಾಮಸೇತು ಎನ್ನುವುದೇ ಕಾಲ್ಪನಿಕ ಎಂದಿದ್ದನ್ನು, ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದನ್ನು ದೇಶದ ಜನತೆ ಮರೆತಿಲ್ಲ ಎಂದು ಬರೆದುಕೊಂಡಿದ್ದಾರೆ.







