Student Muskan: ಮುಸ್ಕಾನ್ ವಿರುದ್ಧ ತನಿಕೆ ಮಾಡುವಂತೆ ಅನಂತ ಕುಮಾರ ಹೆಗಡೆ ಮನವಿ ಪತ್ರ
1 min read
ಮುಸ್ಕಾನ್ ವಿರುದ್ಧ ತನಿಕೆ ಮಾಡುವಂತೆ ಅನಂತ ಕುಮಾರ ಹೆಗಡೆ ಮನವಿ ಪತ್ರ
ಕಾರವಾರ: ಹಿಜಾಬ್ ಗಲಾಟೆ ಸಮಯದಲ್ಲಿ ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಅಂತ ಘೋಷಣೆ ಕೂಗಿದ್ದು, ಇವರ ವಿರುದ್ಧ ತನಿಕೆ ಮಾಡುವಂತೆ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಂ ಅವರಿಗೆ ತನಿಕೆ ಮಾಡುವಂತೆ ಮನವಿ ಪತ್ರ ಪರೆದ ಸಂಸದರು ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜಿಹಾರಿ ಹೊಗಳಿದ್ದಾನೆ. ಈ ಕುರಿತು ತನಿಖೆ ಮಾಡುವಂತೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಇನ್ನೂ ಪ್ರಕರಣ ಏನೆಂದರೆ ಹಿಜಾಬ್ ಗಲಾಟೆ ಸಮಯದಲ್ಲಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಜೈ ಶ್ರೀರಾಮ ಅಂತ ಘೋಷಣೆ ಕೂಗಿದ್ದಾರು. ಆಗ ವಿದ್ಯಾರ್ಥಿನಿ ಮುಸ್ಕಾನ್ ಪ್ರತಿಯಾಗಿ ಅವರ ಎದುರು ಅಲ್ಲಾಹು ಅಕ್ಬರ್ ಅಂತ ಘೋಷಣೆ ಕೂಗಿದ್ದರು. ಇದಾದ ಬಳಿಕ ಈ ವಿಷಯ ರಾಜ್ಯವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು.
ಈ ಸಂಬಂಧ ಇತ್ತೀಚಿಗೆ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜಿಹಾರಿ ಮುಸ್ಕಾನ್ ಳನ್ನು ಹೊಗಳಿದ್ದಾನೆ. ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ತೀರ್ವ ಚರ್ಚೆಗೆ ಗ್ರಾಸವಾಗಿತ್ತು. ಆದಕಾರಣ ಇದನ್ನು ತನಿಕೆ ಮಾಡಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಿಎಂ ಬೊಮ್ಮಾಯಿ ಅವರಿಗೆ ವಿದ್ಯಾರ್ಥನಿ ವಿರುದ್ಧ ತನಿಕೆ ಮಾಡುವಂತೆ ಪತ್ರ ಬರೆದಿದ್ದಾರೆ.
ಪತ್ರದ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿಯವರು, ಅನಂತ್ ಕುಮಾರ ಹೆಗಡೆ ಅವರ ಬಳಿ ಚರ್ಚೆ ಮಾಡುತ್ತೇನೆ. ಅವರ ಬಳಿ ಇರುವ ಮಾಹಿತಿ ಕಲೆಹಾಕಿ ಮುಂದಿನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.