`ಕಾಮಿಡಿ ಆಕ್ಟರ್ ಕಟೀಲ್’ಗೆ ಸಿದ್ದರಾಮಯ್ಯ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ : ಕಾಂಗ್ರೆಸ್
ಬೆಂಗಳೂರು : ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಲವು ದಿನಗಳಿಂದ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರ ಸ್ಥಿತಿ ನಾಯಿಪಾಡಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲ್ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, “ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ..? ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆಕ್ಟರ್ ನಳಿನ್ ಕುಮಾರ್ ಕಟೀಲ್ ಸಾಕ್ಷಿ, ಇವರ ಮಾತಲ್ಲಿ ಘನತೆ,ಗೌರವ, ಬದ್ಧತೆ, ಯಾವುದೂ ಇಲ್ಲ. ಸರ್ವಜನಾಂಗದ ನಾಯಕ, ಹಣಕಾಸು ತಜ್ಞ, 168 ಯೋಜನೆಗಳನ್ನ ಘೋಷಿಸಿ ಜಾರಿಗೊಳಿಸಿ ನುಡಿದಂತೆ ನೆಡೆದ ನಾಯಕ ಸಿದ್ದರಾಮಯ್ಯ.
ಒಂದು ಪಂಪ್ ವೆಲ್ ಮೇಲ್ಸೇತುವೆಯನ್ನ ಸಮಯಕ್ಕೆ ಮುಗಿಸಲಾಗದ ನಳಿನ್ ಕುಮಾರ್ ಕಟೀಲ್‍ರಿಗೆ ಸಿದ್ದರಾಮಯ್ಯ ರವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ನಮ್ಮ ಪ್ರತಿ ಕಾರ್ಯಕರ್ತರಲ್ಲೂ ಸಿದ್ದರಾಮಯ್ಯನವರ ಬಗ್ಗೆ ಅದಮ್ಯವಾದ ಗೌರವವಿದೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡು : ಕಟೀಲ್ ವ್ಯಂಗ್ಯ
ನಳಿನ್ ಕುಮಾರ್ ಕಟೀಲ್ ರವರೇ ತಾವು ಪದೇ ಪದೇ ಅವಹೇಳನ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ರಿಗೆ ಕನಿಷ್ಠ ನೋಟಿಸನ್ನೂ ಕೊಡದಿದ್ದಿದ್ದು, ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಸಣ್ಣ ಸಮಯ ಕೊಡದಿದ್ದಿದ್ದು ಬಿ.ಎಸ್.ಯಡಿಯೂರಪ್ಪಯವರು ಬಿಜೆಪಿಯಲ್ಲಿ ಯಾವ ಪಾಡಿನಲ್ಲಿದ್ದಾರೆ ಎಂದು ಸೂಚಿಸುತ್ತದೆ, ಪಕ್ಷ ಕಟ್ಟಿದ ಅವರನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ಕಟೀಲ್ ಹೇಳಿದ್ದೇನು..?
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ್ರೆ ಬಿಜೆಪಿ ಸೇರಿದ 17 ಜನರ ಸ್ಥಿತಿ ನಾಯಿ ಪಾಡಾಗುತ್ತೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸದ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡಾಗಿದೆ. ಅವರು ವಲಸೆ ಬಂದವರು ಎಂಬ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ : ಆರ್.ಆರ್ ನಗರ, ಶಿರಾದಲ್ಲಿಂದು ಮನೆ ಮನೆ ಕ್ಯಾಂಪೇನ್; ನಾಳೆ ಓಟಿಂಗ್..!
ಪ್ರತಿದಿನ ಪ್ರಚಾರ ಮಾಡುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಮೇಲಾಗುತ್ತಿದೆ. ಆ ಹತಾಶೆಯಿಂದ ಸಿದ್ದರಾಮಯ್ಯನವರು ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಕಟೀಲ್ ಕಾಲೆಳೆದ್ದರು.
ಇನ್ನು ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ, ಅನುಭವ ಉಳ್ಳವರು ಹೀಗೆಲ್ಲ ಮಾತನಾಡುವುದು ಸರಿಯಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ, ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಲು ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಸಿದ್ದರಾಮಯ್ಯ ಟ್ವೀಟ್
ಸಿದ್ದರಾಮಯ್ಯ ಸಹ ನಳಿನ್ ಕುಮಾರ್ ವಿರುದ್ಧ ಟ್ವೀಟ್ ಮಾಡಿದ್ದರು. “ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು.
ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ” ಎಂದು ಹೇಳಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel