ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

`ಶಿರಾ’ ಕೋಟೆಯಲ್ಲಿ ಖಾತೆ ತೆರೆದು ಇತಿಹಾಸ ಬರೆದ `ಕಮಲ’; ರಾಜೇಶ್‍ಗೌಡ ಭರ್ಜರಿ ಗೆಲುವು

Kariyappa N by Kariyappa N
November 10, 2020
in Newsbeat, Politics, Samagra karnataka, ರಾಜ್ಯ
sira by election
Share on FacebookShare on TwitterShare on WhatsappShare on Telegram

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಮೊದಲ ವಿಜಯದ ಖಾತೆ ತೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಕಾಂಗ್ರೆಸ್‍ನ ಹಿರಿಯ ನಾಯಕ, ಮಾಜಿ ಸಚಿವ ಟಿ.ಬಿ ಜಯಚಂದ್ರ ಎದುರು ಸುಮಾರು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಗೆಲುವು ಸಾಧಿಸುವ ಮೂಲಕ ಶಿರಾ ಕೋಟೆಯಲ್ಲಿ ಕಮಲ ಅರಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

rajesh gowda sira
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದಾಗಿನಿಂದಲೂ ರಾಜೇಶ್‍ಗೌಡ ಮುನ್ನಡೆ ಕಾಯ್ದುಕೊಳ್ಳುತ್ತಲೇ ಬಂದಿದ್ದರು. 15, 16ನೇ ಸುತ್ತಿನ ಮತ ಎಣಿಕೆ ಸಂಸರ್ಭದಲ್ಲಿ ರಾಜೇಶ್‍ಗೌಡ ಹಾಗೂ ಕಾಂಗ್ರೆಸ್‍ನ ಟಿ.ಬಿ ಜಯಚಂದ್ರ ನಡುವೆ ನೆಕ್-ಟು-ನೆಕ್ ಅಂತರ ಏರ್ಪಟ್ಟಿತ್ತು. ನಂತರ ಸುತ್ತುಗಳಲ್ಲಿ ರಾಜೇಶ್‍ಗೌಡ ಅವರ ಮುನ್ನಡೆಯ ಅಂತರ ಹೆಚ್ಚುತ್ತಾ ಹೋಗಿದ್ದು, 24ನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ರಾಜೇಶ್‍ಗೌಡ 74,522 ಮತ ಗಳಿಸಿದರೆ, ಕಾಂಗ್ರೆಸ್ ಟಿ.ಬಿ ಜಯಚಂದ್ರ 61,573 ಮತಗಳು ಬಂದಿವೆ. ಜೆಡಿಎಸ್‍ನ ಅಮ್ಮಾಜಮ್ಮ ಅವರಿಗೆ 35,982 ಮತಗಳು ಬಂದಿವೆ. ಒಟ್ಟು 12,949 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ
ಶಿರಾ: ಮತ ಎಣಿಕೆ ವಿವರ(24ನೇ ಸುತ್ತು)
ರಾಜೇಶ್‍ಗೌಡ: ಬಿಜೆಪಿ- 74,522-ಅಂತರ 12,949-ಗೆಲುವು
ಟಿ.ಬಿ ಜಯಚಂದ: ಕಾಂಗ್ರೆಸ್-61,573 -ಸೋಲು
ಅಮ್ಮಾಜಮ್ಮ: ಜೆಡಿಎಸ್-35,982-ಸೋಲು

Related posts

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

July 31, 2026
ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

July 31, 2026

ಹಣ ಹಂಚಿ ಗೆದ್ದಿಲ್ಲ-ರಾಜೇಶ್‍ಗೌಡ
ಶಿರಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವುದು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ, ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ನೋಡಿ ಜನರು ಮತ ಹಾಕಿದ್ದಾರೆ. ಈವರೆಗೆ ಅಧಿಕಾರ ನಡೆಸಿದ ಯಾವ ಪಕ್ಷಗಳೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿಲ್ಲ. ಆದರೆ, ಆ ಕೆಲಸವನ್ನು ಸಿಎಂ ಯಡಿಯೂರಪ್ಪ ಮಾಡಿದ್ದಾರೆ. ಹೀಗಾಗಿ ಕಾಡುಗೊಲ್ಲರ ಸಮುದಾಯ ನಮ್ಮ ಕೈಹಿಡಿದಿದೆ. ಆ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇವೆ. ನನಗೆ ಯಾವುದೇ ಸನ್ಮಾನ ಬೇಡ. ಈ ಕ್ಷೇತ್ರದ ಗೆಲುವಿಗೆ ಎಲ್ಲರೂ ಶ್ರಮಿಸಿದ್ದಾರೆ. ಗೆಲುವಿನ ಕ್ರೆಡಿಟ್ ಎಲ್ಲರಿಗೂ ಸಲ್ಲುತ್ತದೆ ಎಂದು ರಾಜೇಶ್‍ಗೌಡ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಯುವ ಸಮುದಾಯ ಶ್ರಮ ನನ್ನ ಗೆಲುವಿನಲ್ಲಿದೆ. ಎಲ್ಲ ಸಮುದಾಯದವರು ನನ್ನನ್ನು ಬೆಂಬಲಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ನೀರಾವರಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಬಿಜೆಪಿ ವಿಜೇತ ಅಭ್ಯರ್ಥಿ ರಾಜೇಶ್‍ಗೌಡ ಭರವಸೆ ನೀಡಿದ್ದಾರೆ.

ಇತಿಹಾಸ ಬರೆದ ಬಿಜೆಪಿ
2008ರ ಚುನಾವಣೆಯಲ್ಲಿ 24, 600 ಮತ ಪಡೆದಿದ್ದ ಬಿಜೆಪಿ, 2018ರಲ್ಲಿ ಕೇವಲ 16 ಸಾವಿರ ಮತ ಪಡೆದು ಹೀನಾಯ ಪರಿಸ್ಥಿತಿಯಲ್ಲಿತ್ತು. ಇಲ್ಲಿಯವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾರುಪತ್ಯ ಜೋರಾಗಿಯೇ ಇತ್ತು, ಜತೆಗೆ ಪರಸ್ಪರ ಎದುರಾಳಿಗಳಾಗಿದ್ದವು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಮ್ಯಾಜಿಕ್ ಮಾಡಿದಂತೆಯೇ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಶಿರಾದಲ್ಲೇ ಠಿಕಾಣಿ ಹೂಡಿದ್ದ ವಿಜಯೇಂದ್ರ, ರಾಜೇಶ್‍ಗೌಡ ಗೆಲುವಿಗೆ ರಹಸ್ಯ ಕಾರ್ಯತಂತ್ರ ಹೂಡಿದ್ದರು.

b.y vijayendra
ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನೇ ಬಿಜೆಪಿ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದಲ್ಲದೆ, ಮದ್ದಕನಹಳ್ಳಿ ಕಲ್ಲುಗಣಿಗಾರಿಕೆ ಬಂಡೆ ವಿಚಾರದಲ್ಲಿ ಕಾಂಗ್ರೆಸ್‍ನ ಟಿ.ಬಿ ಜಯಚಂದ್ರ ನಡೆದುಕೊಂಡ ರೀತಿಯನ್ನು ಬಿಜೆಪಿ ತನ್ನ ಬಂಡವಾಳವಾಗಿಸಿಕೊಂಡು ತನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: ammajammabjp winby electionCongressJDSrajesh gowdaSirat.b jayachandra
ShareTweetSendShare
Join us on:

Related Posts

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

by Shwetha
July 31, 2026
0

ರಾಜ್ಯಸಭೆಯ ನಿನ್ನೆ ಕಲಾಪವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಯಿತು. ದೆಹಲಿ ಗಲಭೆ ಸೇರಿದಂತೆ ದೇಶದ ಪ್ರಮುಖ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವ...

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

by Shwetha
July 31, 2026
0

ನೀಟ್ ಪರೀಕ್ಷಾ ಅಕ್ರಮದ ಹೆಸರಿನಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ದೊಡ್ಡ ಮಟ್ಟದ ವ್ಯವಸ್ಥಿತ ಪಿತೂರಿ ನಡೆದಿದೆಯೇ ಎಂಬ ಬಲವಾದ ಸಂಶಯ ಈಗ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಸತತ...

ರಾಜೀನಾಮೆ ವದಂತಿಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ

ರಾಜೀನಾಮೆ ವದಂತಿಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ

by Shwetha
July 31, 2026
0

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ಮಾಡಿ ಮನವಿ ಮಾಡಿದ್ದಾರೆ ಎಂಬ ವರದಿಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ತಳ್ಳಿಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ...

ರಾಮಾಯಣ ಟ್ರೈಲರ್ ನೋಡಿ ಸಿನಿಪ್ರಿಯರು ಸುಸ್ತು- ಎಐ ಯುಗದಲ್ಲೂ ಕಾರ್ಟೂನ್ ತರಹದ ದೃಶ್ಯಗಳೇ? ಯಶ್ ನಟನೆ ಹೊರತುಪಡಿಸಿ ರಾಮಾಯಣದಲ್ಲಿ ಮತ್ತೇನೂ ಇಲ್ಲ: ಧಾರಾವಾಹಿ ರೇಂಜ್ ಗೆ ಇಳಿಯಿತೇ ಬಹುನಿರೀಕ್ಷಿತ ಸಿನಿಮಾ?

ರಾಮಾಯಣ ಟ್ರೈಲರ್ ನೋಡಿ ಸಿನಿಪ್ರಿಯರು ಸುಸ್ತು- ಎಐ ಯುಗದಲ್ಲೂ ಕಾರ್ಟೂನ್ ತರಹದ ದೃಶ್ಯಗಳೇ? ಯಶ್ ನಟನೆ ಹೊರತುಪಡಿಸಿ ರಾಮಾಯಣದಲ್ಲಿ ಮತ್ತೇನೂ ಇಲ್ಲ: ಧಾರಾವಾಹಿ ರೇಂಜ್ ಗೆ ಇಳಿಯಿತೇ ಬಹುನಿರೀಕ್ಷಿತ ಸಿನಿಮಾ?

by Shwetha
July 31, 2026
0

ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ನಿತೀಶ್ ತಿವಾರಿ ನಿರ್ದೇಶನದ ಪೌರಾಣಿಕ ಚಿತ್ರ ರಾಮಾಯಣದ ಮೊದಲ ಭಾಗದ ಟ್ರೈಲರ್ ನಿನ್ನೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೂ ಮೀರಿದ...

ಕಾವೇರಿ ನೀರು: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

ಕಾವೇರಿ ನೀರು: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

by Shwetha
July 31, 2026
0

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ದೆಹಲಿಯಲ್ಲಿ ನಡೆದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram