ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ

1 min read
Siddaramaiah saaksha tv

ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ Siddaramaiah saaksha tv

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಮುಗಿಬಿದ್ದಿದೆ.

ದಲಿತ ವಿರೋಧಿ ಸಿದ್ದರಾಮಯ್ಯ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕೆಂಡಕಾರುತ್ತಿದೆ.

ಬಿಜೆಪಿ ಟ್ವಿಟ್ಟರ್ ನಲ್ಲಿ…

ಸಿದ್ದರಾಮಯ್ಯನವರೇ, ದಲಿತ ಪರ ಕಾಳಜಿ ಮೆರೆದಿದ್ದೀರಲ್ಲವೇ? ಹಾಗಾದರೆ, ಕೊರಟಗೆರೆಯಲ್ಲಿ ದಲಿತ ನಾಯಕ ಡಾ.ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಮುಖ್ಯಮಂತ್ರಿಯಾಗುವುದಕ್ಕೆ ಪರಮೇಶ್ವರ್ ಅವರು ಅಡ್ಡಿಯಾಗುತ್ತಾರೆ ಎನ್ನುವ ಕಾರಣಕ್ಕೆ ನೀವೇ ಸೋಲಿಸಿದ್ದಲ್ಲವೇ? ಸತ್ಯದರ್ಶನ ಮಾಡಿಸುವಿರಾ ಸಿದ್ದರಾಮಯ್ಯ?

Siddaramaiah saaksha tv

ಮಾನ್ಯ ಸಿದ್ದರಾಮಯ್ಯನವರೇ, ನೀವು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಹೊಟ್ಟೆಪಾಡಿಗಾಗಿಯೇ? ಮಲ್ಲಿಕಾರ್ಜುನ ಖರ್ಗೆ ಅವರನ್ನು ನೀವು ಪಿತೂರಿ ನಡೆಸಿ ದೆಹಲಿಗೆ ಸಾಗಹಾಕಿದ್ದು ಹೊಟ್ಟೆಪಾಡಿಗಾಗಿಯೇ?

ಮಾನ್ಯ ಸಿದ್ದರಾಮಯ್ಯನವರೇ, ದಲಿತ ನಾಯಕ ಡಾ.ಮಹಾದೇವಪ್ಪ ಅವರನ್ನು ದೂರವಿಟ್ಟಿದ್ದು ಹೊಟ್ಟೆಪಾಡಿಗಾಗಿಯೇ? ದಲಿತ ನಾಯಕ ಪರಮೇಶ್ವರ್ ಅವರ ಏಳಿಗೆ ಸಹಿಸದ್ದು ಹೊಟ್ಟೆಪಾಡಿನ ಕಾರಣಕ್ಕಾಗಿಯೇ? ಈಗ ನೀವು ದಲಿತ ಪರ ಹೇಳಿಕೆ ನೀಡುತ್ತಿರುವುದೂ ಹೊಟ್ಟೆಪಾಡಿಗಾಗಿಯೇ ಎಂದು ಕುಟುಕಿದೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd